ಗೊಲ್ಲಯ್ಯ ಗೊಲ್ಲಯ್ಯ ಗೋವೆಲ್ಲ ಎಲ್ಲಯ್ಯ
ಊದಯ್ಯ ಊದಯ್ಯ ಕೊಳಲನ್ನ ಊದಯ್ಯ
ಗೋವೆಲ್ಲ ಓಡೋಡಿ ಓಡೋಡಿ ಬರುತಾವೊ
ಕುಣಿಬಾರೊ ತಾನಿ ತಂದಾನೋ
ಕುಣಿಬಾರೊ ತಾನಿ ತಂದಾನೋ |ಗೊಲ್ಲಯ್ಯ|
ಕುಂಬಾರ ಹೇಳು ನಂಗೆ
ತಿರುಗಾಣಿ ತಿರುಗೋದು ಹೆಂಗೆ |೨|
ತುಂಡಾದ ಚಂದ್ರನ ಹಂಗೆ
ಮಡಿಕೇನ ಮಾಡೋದು ಹೆಂಗೆ
ಆ ಬಾನಲ್ಲಲ್ಲಲ್ಲಲ್ಲಿ ಹಲವು ಸಣ್ಣ
ಚಂದಿರನ ನಾವಿಡೋಣ ಬಾ
ಕುಣಿಯೋಣ ತಾನಿ ತಂದಾನೋ
ಕುಣಿಯೋಣ ತಾನಿ ತಂದಾನೋ |ಗೊಲ್ಲಯ್ಯ|
ಬಾರಯ್ಯ ಬಳೆಗಾರಣ್ಣ
ತೋರಯ್ಯ ಮಲಹಾರನ |೨|
ಬಳೆಗಿಂತ ಬಣ್ಣ ಬಣ್ಣ
ನೀ ಆಡೋ ಮಾತು ಚೆನ್ನ
ಆ ಮಳೆ ಬಿಲ್ಲ ಬಳೆ ತರುತೀಯೇನೋ
ತೊಡುವೆನೇನೋ ಈ ಚಕೋರಿಗೆ
ಕುಣಿಯೋಣ ತಾನಿ ತಂದಾನೋ
ಕುಣಿಯೋಣ ತಾನಿ ತಂದಾನೋ |ಗೊಲ್ಲಯ್ಯ|
ಚಿತ್ರ: ಕೆಂಪ
No comments:
Post a Comment