Showing posts with label payana. Show all posts
Showing posts with label payana. Show all posts

Wednesday, 29 October 2008

ಮೋಡದ ಒಳಗೆ...


ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಕಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ

ನಿಂತಲಿ ನಾ ನಿಲಲಾರೆ ಎಲ್ಲರೂ ಹೀಗಂತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೂ ನಾನೆ ಪ್ರೀತಿ ಬಲೆಯೊಳಗೂ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜ್ನೂ ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ |ಮೋಡದ ಒಳಗೆ|

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ ||ಮೋಡದ ಒಳಗೆ||


ಚಿತ್ರ: ಪಯಣ

Friday, 24 October 2008

ಮಾನಸ ಗಂಗೆ...


ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ

ಚಂದಮಾಮ ಕೈ ಚಾಚಿದ ಬಾರೆ ಎಂದು ಗೋಳಾಡಿದ
ಇವಳ ಬಿಟ್ಟು ಹೋಗಲಾರೆ ಊಹುಂ ಎಂದನು
ಅಂತರಂಗ ಹಾಲಾಯಿತು ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕೂ ಇವಳೇ ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ ಅನುಬಂಧಕೂ ಇವಳೇ
ಅನುರಾಗವು ಇವಳೇ ಅನುಗಾಲವು ಇವಳೇನೆ
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ

ಕಪ್ಪು ಕಣ್ಣು ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆ ಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಕಣ್ಣುಗಳಿಗೆ ಬಲು ರೂಪಸಿ
ನನ್ನ ಪಾಡು ಇವಳೇ ನನ್ನ ಹಾಡು ಇವಳೇ
ನನ್ನ ಜಾಡು ಇವಳೇ ಸಂದೇಶವು ಇವಳೇನೆ
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ


ಚಿತ್ರ: ಪಯಣ