Thursday 29 May, 2008

ಸ್ಟಾಂಡಿಂಗ್ ಹೋಟೆಲ್

ಅರೇ! ಇದೆಂತರ "ಸ್ಟಾಂಡಿಂಗ್ ಹೋಟೆಲ್" ಹೇಳಿದರೆ? ಹೇಳಿ ನಿಂಗೊ ಕೇಳಲೂ ಸಾಕು. ಸತ್ಯಕ್ಕೂ ಹೇಳಕ್ಕಾದರೆ ನಿಂಗೊಗೆ ಹೆಚ್ಚಿನವಕ್ಕೂ ಇದೆಂತರ ಹೇಳಿ ಕೇಳಿ ಗೊಂತಿರ. ಆದರೆ ಬೆಂಗಳೂರಿಂಗೆ ಬಂದವೆಲ್ಲರೂ ಒಂದರಿಯಾದರೂ ಈ ಸ್ಟಾಂಡಿಂಗ್ ಹೋಟೆಲ್ಲುಗೊಕ್ಕೆ ಹೋಗಿಪ್ಪೀರಿ.

ಆನು ಮೊದಲು ಉಡಿಪಿಲ್ಲಿ ಇತ್ತಿದೆ. ಸಾಧಾರಣವಾಗಿ ಅಲ್ಲಿ ಇಪ್ಪ ಹೋಟೆಲುಗಳಲ್ಲಿ ಗಿರಾಕಿಗೊಕ್ಕೆ ಕೂಬಲೆ ವ್ಯವಸ್ಥೆ ಇರುತ್ತು. ಹಾಂಗೆಯೇ serve ಮಾಡುಲೆ servers ಇಕ್ಕು. ಇಲ್ಲದ್ದರೆ ಹಾಂಗಿಪ್ಪ ಹೋಟೆಲಿಂಗೆ ಅಲ್ಲಿ ಜನಂಗಳೂ ಕಡಮ್ಮೆ ಬಕ್ಕಷ್ಟೆ. ಹೀಂಗಿಪ್ಪ ಊರಿಂದ ಆನು ನಮ್ಮ silicon city ಬೆಂಗಳೂರಿಂಗೆ ಬಂದೆ ನೋಡಿ. ಇಲ್ಲಿ ಈ "ಸ್ಟಾಂಡಿಂಗ್ ಹೋಟೆಲ್" ಗಳದ್ದೇ ಕಾರುಬಾರು. ಪ್ರತಿಯೊಬ್ಬಂಗೂ ಅವನವನ ಕೆಲಸದ್ದೇ ತೆರಕ್ಕ. ಇವರ life styleಗೆ ಸರಿಯಾಗಿ fast food ಹೋಟೆಲ್ಸ್ ಇಲ್ಲಿ famous. ಹೆಚ್ಚಾಗಿ self service ಇಪ್ಪ ಇಲ್ಲಿ 2, 3 table ಹಾಕಿ ಇರುತ್ತವು. ಅಲ್ಲಿಯೇ ನಾವು ನಿಂದುಕೊಂಡು ತಿಂಬ್ರಾಣ ಮುಗಿಸಿಕೊಂಡು ಹೋಯೆಕ್ಕು.

ಎನಗೆ ಅವಿನಾಶ (ಎನ್ನ room mate) ಸುರುವಿಂಗೆ introduce ಮಾಡಿ ಕೊಟ್ಟದು ಈ "ಪ್ರಸಿದ್ಧಿ ಹೋಟೆಲ್", ಜಯನಗರ 9th blockಲಿ ಇಪ್ಪದು. ಇಲ್ಲಿ ಹಾಂಗೆ 2, 3 table ಹಾಕಿದ್ದವು. Customerಗೊ ಜಾಸ್ತಿ ಬತ್ತವು ಹೇಳಿ ಎದುರು ಇಪ್ಪ pedestrain walk ಲಿ ಸಾನ 2 table ಹಾಕಿದ್ದವು. ಇಲ್ಲಿ ಹಾಂಗೆ self service ಮಾಡ್ಕೊಂಡು, ನಿಂದುಕೊಂಡೇ ಎಂಗೊ ತಿಂಬದು ಮುಗಿಸಿಕೊಂಡು officeಗೆ ಹೋಪದು. ಕೆಲವು ಸರ್ತಿ ಈ ಹೋಟೆಲಿನ ಹೆಸರು ಎನಗೆ ನೆನಪ್ಪಿಂಗೆ ಬತ್ತಿಲ್ಲೆ. ಅಂಬಗ ಎಲ್ಲ ಆನು ಇದರ "ಆ ಸ್ಟಾಂಡಿಂಗ್ ಹೋಟೆಲ್ ಇದ್ದಲ್ಲದ" ಹೇಳಿ ಹೇಳುವುದು. ಹಾಂಗಾಗಿ ಎಂಗಳ ಮನೆಲಿ ಈ ಹೋಟೆಲ್ "ಸ್ಟಾಂಡಿಂಗ್ ಹೋಟೆಲ್" ಹೇಳಿಯೇ world famous ಆಯಿದು.

Wednesday 28 May, 2008

ವಚನಗಳು


Always remember MONEY is not everything; but make sure that you have made it a lot before talking such nonsense.

Monday 26 May, 2008

ಒಂದೊಂದೆ...

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿ ತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೆ ಹೇ

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ

ಸುಳ್ಳು ಸುಳ್ಳೆ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಬ್ಬಲ್ಲಿ ಮುತ್ತಿಟ್ಟೋರು ಯಾರು
ಕೆನ್ನೆ ನಿಂದ ಮುತ್ತು ನಂದ
ಬಗೆ ಹರಿಯದ ಒಗಟು ಇದೂ

ಮೊದಲು ಅಪ್ಪಿಕೊಂಡ, ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸಿಗುಟ್ಟಿದ್ದು ಯಾರೂ.

ಈ ವಿರಹದಲಿ ಅಡಗಿದೆಯೊ,
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯಾ

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನಾ

ಓ ಓ ಓ ಓ ಸಣ್ಣ ತಪ್ಪಿಗಾಗಿ, ಮಾತು ಸತ್ತು ಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ದು ಯಾರು
ತಪ್ಪು ನಿಂದ? ಒಪ್ಪು ನಂದ?
ಕೊನೆಗಾಣದ ಒಗಟು ಇದೂ

ಮುಂಜಾನೆ ನಿದ್ರೆಲಿ ನಾ ಹೇಳಲಾರದ ಕನಸ ನೀ ಸಿಕ್ಕಾಗ ಮಾತಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ
ಕನಸು ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ


ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್

Thursday 15 May, 2008

Life is beautiful

Here is an article by Allen Partridge in Adobe blogs web page. He shares some of his experiences during the visit to Adobe Bangalore and the interactions with Director Engineering team. Interestingly I am part of this Director Engg team, so I am posting a link to this web page here :-).
http://blogs.adobe.com/shockwaves/2008/01/life_is_beautiful_on_bannergha.html

ನಿನ್ನ ನೋಡಲೆಂತೋ...


ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರಾ ಥರಾ ಕೇಳಲೊಂಥರಾ ಥರಾ

ಕಣ್ಣಿಗೇನು ಕಾಣದೆ ಸ್ಪರ್ಶವೇನೂ ಇಲ್ಲದೆ
ಏನು ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನದೇ ನೂರು ನೆನಪು ಮೂಡಿದೆ
ನನ್ನಲೇನೊ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರಾ..

ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೆ ಇರದ ಉತ್ಸವ ಪ್ರೀತಿ ಒಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತು ಕಾದವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸು ಕಾಡಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರಾ..


ಚಿತ್ರ: ಮುಸ್ಸಂಜೆ ಮಾತು
ಬರೆದವರು: ರಾಮ್ ನಾರಾಯಣ್

Monday 12 May, 2008

ಕಾಗದದ ದೋಣಿ...


ಕಾಗದದ ದೋಣಿ ನಮ್ಮ ಸಂಸಾರ
ಮುಳುಗದಂತೆ ನೋಡುವುದು ನಿನ್ನ ಭಾರ
ಪ್ರೀತಿ ತಂದು ತುಂಬುವುದೆ ನಿನ್ನ ಭಾರ
ಹೂವಿನಂತೆ ಸಾಗಿಸುವೆ ಸಂಸಾರ
ಸಖಿ ಸಖ...
ನಾನೂ ನೀನೂ ಜೋಡಿ.. ಜೀವನ ಹೂವಿನ ದಾರಿ.

ಆಗಸಕ್ಕೆ ಏಣಿಯ ಹಾಕಿ ಜಾರುವುದು ಏಕೆ ಪ್ರಾಣ ಸಖಿ
ಗಾಳಿ ಗೋಪುರ ಕಟ್ಟಲಾಗದೆ ಸೋಲುವುದು ಏಕೆ ಪ್ರಾಣ ಸಖ
ಬಂದಷ್ಟೆ ತಂದು ಇದ್ದಷ್ಟೆ ಉಂಡು ಹಾಯಾಗಿ ನಾವು ಬಾಳೋಣ
ಬೆಚ್ಚನೆ ಮನದ ಇಚ್ಛೆಯ ತಣಿಸಿ ಸ್ವರ್ಗಕ್ಕೆ ಕಿಚ್ಚು ಹಚ್ಚೋಣ.

ಬಾಳಿನಲ್ಲಿ ಬರೋ ಪ್ರತಿ ರಾತ್ರಿಯ ಮೊದಲ ರಾತ್ರಿ ಎನಿಸೋಣ
ಬಯಸದೆ ಬಂದ ಈ ಮ್ಯೆತ್ರಿಯ ಮಧುರವಾಗಿ ಉಳಿಸೋಣ
ದುಡುಕು ಹಾಳು ಸಿಡುಕು ಗೋಳು ಎಂದು ಬುದ್ಧಿಗೆ ತಿಳಿಸೋಣ
ದೂರದ ಬೆಟ್ಟ ನುಣ್ಣಗೆ ಎಂದು ನೊಂದ ಮನಸಿಗೆ ಕಲಿಸೋಣ.

ಚಿತ್ರ: ನಾನು ನೀನು ಜೋಡಿ

Wednesday 7 May, 2008

ಒಮ್ಮೆ ನಿನ್ನನ್ನು ಕಣ್ತುಂಬ...

ನನ್ನ ಹಳೆಯ ನೆನಪುಗಳ ಕೆದಕುತ ಬರೆಯುತ್ತಿದ್ದೇನೆ ಈ ಕೆಳಗಿನ ಸಿನಿಮಾ ಹಾಡಿನ ಸಾಲುಗಳನ್ನ...


ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೊ ಬಾನಲ್ಲೊ ಇನ್ನೆಲ್ಲೋ ನಾ ಕಾಣೆ

ಅರಳಿರುವ ಹೂವಿನಲ್ಲಿ ನಿನ್ನ ನೋಟವ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ
ಇಂಪಾದ ಗಾನದಲ್ಲಿ ನಿನ್ನ ಮನದ ಭಾವವ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವ
ನವಿಲಾಡೋ ನಾಟ್ಯದಲ್ಲಿ ನಿನ್ನ ಚೆಂದವ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರಗಾದೆ

ಮಿನುಗುತಿಹ ತಾರೆಯೆಲ್ಲ ನಿನ್ನ ಕಣ್ಗಳೋ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ


ಚಿತ್ರ: ಗಾಳಿ ಮಾತು
ಬರೆದವರು: ಚಿ ಉದಯಶಂಕರ್

ಮಳೆ ನಿಂತು ಹೋದ ಮೇಲೆ...


ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ.

ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ.

ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೆ ಏತಕೀ ಕಂಪನ
ಹೃದಯವು ಇಲ್ಲೆ ಕಳೆದೆ ಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ.


ಚಿತ್ರ: ಮಿಲನ
ಬರೆದವರು: ಜಯಂತ ಕಾಯ್ಕಿಣಿ

Tuesday 6 May, 2008

ಮಳೆ ಬರುವ ಹಾಗಿದೆ...


ಮಳೆ ಬರುವ ಹಾಗಿದೆ ಮನವೀಗ ಹಾಡಿದೆ |
ಹೃದಯದಲ್ಲಿ ಕೂತು ನೀನು ನನ್ನ ಕೇಳ ಬೇಕಿದೆ
ಸವಿಗನಸು ಕಾಡಿದೆ ನಸು ನಗುವು ಮೂಡಿದೆ |
ಕಾಣದಂತೆ ನಿಂತು ನೀನು ನನ್ನ ನೋಡ ಬೇಕಿದೆ.

ನಿನ್ನ ನಗುವಿನಲ್ಲೆ ನನ್ನ ನಸುಕು
ನಿನ್ನ ರೂಪ ಧರಿಸಿ ಬಂದು ನಡೆದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವೂ ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳ ಬೇಕಿದೆ. ||

ಎದೆಯ ಬಾಗಿಲಲ್ಲಿ ನಿನ್ನ ಸುಳಿವು
ಸಣ್ಣ ಆಸೆಯಲ್ಲಿ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ
ಮರೆತ ಹೋಗಿ ಚೂರು ನಟಿಸಿ ನಿನ್ನ ಕಾಡ ಬೇಕಿದೆ. ||


ಚಿತ್ರ: ಮೊಗ್ಗಿನ ಮನಸು
ಬರೆದವರು: ಜಯಂತ ಕಾಯ್ಕಿಣಿ

Monday 5 May, 2008

ನೆನಪು ನೆನಪು...


ನೆನಪು ನೆನಪು ಅವಳ ನೆನಪು ಸಾವೇ ಇರದ ಸವಿ ನೆನಪು
ನೆನಪು ನೆನಪು ಅವಳ ನೆನಪು ಕೊನೆಯೇ ಇರದ ಚಿರ ನೆನಪು
ಅವಳ ನಗು ಹುಣ್ಣಿಮೆಯ ಬೆಳಗು ನನ್ನೆದೆ ಬಾನಿಗೆ
ಅವಳ ದನಿ ರಾಗಗಳ ಗಣಿ ನನ್ನೆದೆ ಹಾಡಿಗೆ
ಧಮನಿ ಧಮನೀಲೂ ಪ್ರೀತಿ ಧ್ಯಾನ ಒಡಲ ಒಡನಾಡಿ ಅವಳೇ
ಉಸಿರು ಉಸಿರಲೂ ಪ್ರೀತಿ ಧ್ಯಾನ ಸುಖದ ಸುವ್ವಾಲಿ ಅವಳೇ.

ಅವಳುಳಿಸಿ ಹೋದ ಪ್ರೀತಿ ಎದೆಯಲ್ಲಿ ಅಮರವಾಯ್ತು
ಅದು ಸಾಕು ಸಾವಿರ ಜನ್ಮಕೂ
ಅವಳಾಡಿ ಹೋದ ಮಾತು ಕಿವಿಯಲ್ಲಿ ಕವನವಾಯ್ತು
ಅದೇ ನನ್ನ ಬಾಳಿಗೆ ಸ್ಫೂರ್ತಿಯೂ
ಹೊಸ ಉಲ್ಲಾಸ ಉತ್ಸಾಹ ಅವಳಿಂದ ನಾ ಕಂಡೆ ಈ ಜೀವ ಅವಳಲ್ಲವೇ
ಇಲ್ಲಿ ಏಕಾಂಗಿ ನಾನಲ್ಲ ಆ ನೋವು ನನಗಿಲ್ಲ ನನ್ನಲ್ಲಿ ಅವಳಿಲ್ಲವೇ.

ನನ್ನ ಬಾಳ ದಾರಿಯಲ್ಲಿ ನೆರಳಾಗಿ ಅವಳು ಇರಲು ನನ್ನೊಲವು ಬಾಡಲು ಸಾಧ್ಯವೇ
ನಾ ನೋಡೋ ಲೋಕದಲ್ಲಿ ಕಣ್ಣಾಗಿ ಅವಳು ಇರಲು ಜಗವಾಯ್ತು ಸ್ವರ್ಗವು ಮೆಲ್ಲಗೇ
ಆ ಬಿನ್ನಾಣ ಬಿಗುಮಾನ ತುಂಟಾಟ ಕುಡಿನೋಟ ಅಚ್ಚಾಯ್ತು ಎದೆ ಗೂಡಲೆ
ನನ್ನ ಸಂಗಾತಿ ತಂದಂತಹ ಸಂಪ್ರೀತಿ ಇರುವಾಗ ಬೇರೆಲ್ಲ ನನಗೇತಕೆ.


ಚಿತ್ರ: ಸವಿ ಸವಿ ನೆನಪು
ಬರೆದವರು: ಹೃದಯ ಶಿವ

Friday 2 May, 2008

ನನಗೂ ನಿನಗೂ...


ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ.

ನಲುಮೆ ಸ್ನೇಹದ ನವಿರಾದ ಗ್ರಂಥವೇ
ಪುಟವ ತೆರೆಯುವಾಗ ಹಿತವಾದ ಗಂಧವೇ
ಮೊದಲ ನುಡಿಯಲಿ ನಾನೀಗ ತನ್ಮಯ
ಇನ್ನು ಕಥೆಯಲಿ ನೀನೆನ್ನ ಕರೆದೆಯ.

ಮೊದಲ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ
ಮೃದುಲ ಭಾವಕೆ ನನ್ನೊಂದು ಕೋರಿಕೆ
ಎಲ್ಲ ತಿಳಿದರೂ ಯಾಕಿನ್ನೂ ಅಭಿನಯ
ವಿರಹ ಬಂದಿದೆ ಒಲವಿನ್ನು ನಿಶ್ಚಯ.


ಚಿತ್ರ: ಅರಮನೆ
ಬರೆದವರು: ಜಯಂತ ಕಾಯ್ಕಿಣಿ

Thursday 1 May, 2008

ನಿನ್ನ ಈ ಪ್ರೀತಿಗೆ...


ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ
ನಿನ್ನ ಸಂತೋಷಕೆ ಏಳೇಳು ಜನ್ಮವು ನಾ ಕಾಯುವೆ
ನೀನಿಲ್ಲದೆ ಉಸಿರಾಡೊಲ್ಲ ನೀನಿಲ್ಲದೆ ಕಾಲ ಓಡೊಲ್ಲ
ನನ್ನ ಈ ಕಣ್ಣಿನ ಭಾಷೆಗೆ ಹೃದಯವೇ ಸಾಕ್ಷಿಯು
ನನ್ನ ಈ ಹೃದಯದ ಹಾಡಿಗೆ ದೇವರೆ ಸಾಕ್ಷಿಯು.

ಹೃದಯ ಒಂದು ಹೃದಯ ತನ್ನ ಪ್ರೀತಿನ ಹೇಳೋ ಕ್ಷಣ
ಜಗದಲಿ ಸಾವಿರ ಋತುಗಳು ಮೂಡಿ ಬರುತಾವೆ ಒಂದೇ ದಿನ
ಪ್ರೀತಿ ಗುರುತಿಗೆ ನೂರು ತಾಜಮಹಲ ರೆಪ್ಪೆಯಲ್ಲೆ ಕಟ್ಟಬಲ್ಲೆ ನಿನ್ನಾಣೆಗೂ
ಚಂದಿರಂಗು ತೇಲಿದಂಗೆ ಬೆಳದಿಂಗಳ ಕದ್ದು ಮುಚ್ಚಿ ತರಬಲ್ಲೆ ನನ್ನಾಣೆಗೂ
ಯುಗದಾಚೆಗೂ ಯುಗಳ ಗೀತೆನ ಹಾಡುವೆ ನನ್ನ ಪ್ರೀತಿ ಜೋಪಾನ
ನಮ್ಮ ಒಂದೊಂದು ಹೆಜ್ಜೆಯಲೂ ಪ್ರೀತಿಯೇ ಕಾವಲು
ಪ್ರತಿ ಕನಸಿಗೂ ಆಕಾಶವೆ ತೆರೆದಿರೋ ಬಾಗಿಲು.

ಒಲವು ಒಂದು ಒಲವು ಶುರುವಾಗೋದೆ ಗೊತ್ತಾಗದು
ಮನಸಿನ ಮೊದಲ ಕನಸಿನ ಹೆಜ್ಜೆ ಮರೆವಲ್ಲು ಮರೆಯಾಗದು
ಸುತ್ತೋ ಭೂಮಿಯಲ್ಲಿ ನಮಗೊಂದೇ ಚರಿತೆ
ಅನ್ನಿಸುವ ಹಾಗೆ ನಾವು ಬಾಳೋಣ ಬಾ
ನೂರು ಹೊತ್ತು ಸಾವು ನಮಗೆಲ್ಲೇ ಇದ್ದರೂ
ಒಂದೇ ಜೀವವಾಗಿ ಮುಂದೆ ಸಾಗೋಣ ಬಾ
ನಿನ್ನಿಂದಲೇ ನನ್ನ ಉಸಿರಾಟ ಹೌದೆಂದಿದೆ ಭೂಮಿ ತಿರುಗಾಟ
ನಮ್ಮ ಪ್ರತಿ ನಾಳೆಗೂ ಪ್ರೀತಿಯೇ ಬೆಳಕಿನ ತೋರಣ
ನಾಳೆ ಏನಾದರೂ ಸರಿಯೇ ಪ್ರೀತಿಯೇ ಕಾರಣ.


ಚಿತ್ರ: ಹನಿ ಹನಿ
ಬರೆದವರು: ಕೆ. ಕಲ್ಯಾಣ್

ಒಂದೇ ಸಮನೆ...


ಒಂದೇ ಸಮನೆ ನಿನ್ನುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆ ಬಿಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವೇ.

ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೇ
ಪ್ರಾಣಾ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ಹೊಂಗನಸಾಛಾದದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಣಗಿ
ಅವಳನ್ನೆ ಜಪಿಸುವುದೆ ಒಲವೇ.

ನಾಲ್ಕು ಪದದಾ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೇ
ಮೂರು ಸ್ವರದಾ ಹಾಡಿನಲಿ ಹೃದಯವನು ಹರಿಬಿಡಬಹುದೇ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ.


ಚಿತ್ರ: ಗಾಳಿ ಪಟ
ಬರೆದವರು: ಯೋಗರಾಜ್ ಭಟ್

ಬಾ ಮಳೆಯೇ ಬಾ...


ಬಾ ಮಳೆಯೇ ಬಾ, ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೇ, ಹಿಂತಿರುಗಿ ಹೋಗದಂತೇ ಬಿಡದೆ ಬಿರುಸಾಗಿ ಸುರಿ.

ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೆ ನಿಲ್ಲು ನಮ್ಮ ತೆಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ.

ಬೀಸು ಗಾಳಿಯೇ ಬೀಸು ನನ್ನೆದೆಯ ಆಸೆಗಳ
ಬೀಸು ಗಾಳಿಯೇ ಬೀಸು ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು ಹಾಸು ಹೂಗಳ ಹಾಸು
ಅವಳು ಬರುವ ದಾರಿಯಲ್ಲಿ ಕಲ್ಲುಗಳು ತಾಗದಂತೆ
ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ.

ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ ಆರು ಬೇಗನೆ ಆರು
ಶೃಂಗಾರ ಶಯ್ಯೆಯಲ್ಲಿ ನಾಚಿ ನೀರಾಗುವಂತೆ
ಬಾ ಮಳೆಯೇ ಬಾ ಬಿಡದೆ ಬಿರುಸಾಗಿ ಸುರಿ ನಲ್ಲೆ ಹಿಂತಿರುಗಿ ಹೋಗದಂತೆ.


ಚಿತ್ರ: ಆಕ್ಸಿಡೆಂಟ್
ಬರೆದವರು: ಬಿ.ಆರ್. ಲಕ್ಷ್ಮಣ್ ರಾವ್