Showing posts with label neenu banda mele. Show all posts
Showing posts with label neenu banda mele. Show all posts

Friday, 29 August 2008

ನೀನು ಬಂದ ಮೇಲೆ...


ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ.
ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ.


ಹೆಸರನು ಕೂಡಿಸಿ ಬರೆವ ಆ ಖುಷಿ ಇನ್ನೆಲ್ಲು ನಾ ಕಾಣೆ
ಈ ಪ್ರೀತಿ ಎಂತಹ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ ಕಾಡೋದು ಪ್ರೀತಿನೆ
ಅದರಲ್ಲೂ ಆಹಾ ಎಂತಹ ಹಿತ

ಒಂದಿಷ್ಟು ಹುಸಿ ಮುನಿಸು ಒಂದಷ್ಟು ಸಿಹಿ ಕನಸು
ಪ್ರೀತಿಸೋರ ಜೋಳಿಗೇಲಿ ಎಂದೂ ಇರಬೇಕು
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು

ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೇ ಸಪ್ತಪದಿ
ಎಂದೆಂದೂ ಮಾತು ತಪ್ಪೊಲ್ಲ

ಮಡಿದರೆ ನಿನ್ನ ಮಡಿಲ ಮೇಲೆ ಎನುವಂತಹ ಒಪ್ಪಂದ
ಇಂದಿಂದ ಒಪ್ಪೊ ಭಗವಂತ
ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು

ನಿನ್ನನೇ ನಾನೆಣಿಸಿ ನನ್ನೆದೆ ಸಂಭ್ರಮಿಸಿ ನಿನ್ನಲೆ ಸಂಪೂರ್ಣ ಈ ಜೀವನ


ಚಿತ್ರ: ಕೃಷ್ಣ