Showing posts with label nanna edeyali. Show all posts
Showing posts with label nanna edeyali. Show all posts

Friday, 18 July 2008

ನನ್ನ ಎದೆಯಲಿ...

ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
ಕೈ ಮುಗಿವೆ ನನ್ನ ಮರೆತು ಬಿಡು, ಮರೆತು ಬಿಡು, ಮರೆತು ಬಿಡು. |ನನ್ನ|

ಎಂದೋ ಕರಗಿರುವ ಪ್ರೇಮ ಚಂದಮಾಮ
ಹೊರಟು ಹೋದ ಕಾರ್ಮುಗಿಲ ಚಿತೆಗೆ
ಎಂದೂ ಜೊತೆಗೇನೆ ಸಾಗೋ ನನ್ನ ನೆರೆಳು
ಬೇಸರದಿ ಬರುತಲಿದೆ ಜೊತೆಗೆ
ಕತ್ತಲೆಯ ಹೊತ್ತ ಈ ಮುಖವ
ಮರೆತು ಬಿಡು ಬೆಳಕಿನಲೇ. |ನನ್ನ|

ಹಗಲು ಕನಸಿನಲಿ ಗಾಳಿ ಗೋಪುರದಲಿ
ಕುಳಿತೆ ನಾ ಬಳಿದೆ ನಾ ಹೊಳಪು
ನಾಳೆ ಎಂಬುದಕೆ ಹಿಂದು ಮುಂದು ಇಲ್ಲ
ಜೊತೆಗೇಕೆ ಬೆಂಬಿಡದ ನೆನಪು
ಮುಳ್ಳಿರದ ನಿನ್ನ ದಾರಿಯಲಿ ತಿರುಗದಲೇ ನಡೆದು ಬಿಡು
ಅಂತಃಪುರದ ಬಾಗಿಲು ಬಡಿದ ಕೈಗಳ ತಪ್ಪನು ಕ್ಷಮಿಸಿ ಬಿಡು, ಕ್ಷಮಿಸಿ ಬಿಡು
ಅಂಗಳದ ನನ್ನ ಕಾಲ್ಗುರುತು ನಗು ನಗುತ ಅಳಿಸಿಬಿಡು.

ಚಿತ್ರ: ಅರಮನೆ