Showing posts with label gaalipata. Show all posts
Showing posts with label gaalipata. Show all posts

Thursday, 1 May 2008

ಒಂದೇ ಸಮನೆ...


ಒಂದೇ ಸಮನೆ ನಿನ್ನುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆ ಬಿಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವೇ.

ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೇ
ಪ್ರಾಣಾ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ಹೊಂಗನಸಾಛಾದದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಣಗಿ
ಅವಳನ್ನೆ ಜಪಿಸುವುದೆ ಒಲವೇ.

ನಾಲ್ಕು ಪದದಾ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೇ
ಮೂರು ಸ್ವರದಾ ಹಾಡಿನಲಿ ಹೃದಯವನು ಹರಿಬಿಡಬಹುದೇ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ.


ಚಿತ್ರ: ಗಾಳಿ ಪಟ
ಬರೆದವರು: ಯೋಗರಾಜ್ ಭಟ್

Wednesday, 30 April 2008

ಮಿಂಚಾಗಿ ನೀನು ಬರಲು...


ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ.

ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು.

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು.

ಚಿತ್ರ: ಗಾಳಿ ಪಟ
ಬರೆದವರು: ಜಯಂತ ಕಾಯ್ಕಿಣಿ

Thursday, 24 April 2008

ಕವಿತೆ ಕವಿತೆ...


ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೇ ನೀ ತಂದ ಹಾಡಿಗೆ ನಾ ಸೋತೆ.

ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲ ದಡದಾಟೋ ಅಲೆಗಳಲೂ ನಲುಮೆ
ಹೊಮ್ಮುತಿದೆ ರಾಗದಲಿ ಸ್ವರ ಮೀರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು.

ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಾದೋ ಸಮಯ
ಏಕಾಂತ ಕಲ್ಲನ್ನು ಮಾಡುವುದೋ ಕವಿಯ.


ಚಿತ್ರ: ಗಾಳಿಪಟ
ಬರೆದವರು: ಹೃದಯಶಿವ