Tuesday 4 August, 2009

ಅಮ್ಮ ಅಮ್ಮ ನನ್ನಮ್ಮ..

ತಂದಾನೆ.. ಓ..
ತಂದಾನೆ ತಾನೇನಾನಿ ತಾನಾನಾನಾನೋ
ಆರಿರಾರಿರೋ ಆರಿ ರಾರಿರಾರಿರೋ
ಆರಿರಾರಿರೋ ರಾರಿ ರಾರಿರಾರಿರೋ

ಅಮ್ಮ ಅಮ್ಮ ಅಮ್ಮ ನನ್ನಮ್ಮ
ನನ್ನ ಬಿಟ್ಟು ಎಲ್ಲಿ ಹೋದೆಮ್ಮ
ಕೋಟಿ ದೈವ ನಿನ್ನ ಮುಂದೆ ಬೇಡವೇ ಬೇಡಮ್ಮ
ದಾಟಿ ಬಂದು ನೂರು ಗೋಡೆ ನನ್ನನು ನೋಡಮ್ಮ, ಜೋಗುಳ ಹಾಡಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ
ನನ್ನ ಬಿಟ್ಟು ಎಲ್ಲಿ ಹೋದೆಮ್ಮ

ಕೊಡೋರಿಲ್ಲ ಕೈ ತುತ್ತು ಇಡೋರಿಲ್ಲ ಹೂ ಮುತ್ತು
ತೊಡೆ ಮೇಲೆ ಕೂಸಾಗೋ ಮಹಾಭಾಗ್ಯ ಮಣ್ಣಾಯ್ತು
ನೀನಿಲ್ಲದ ಕಾರಣ ನನ್ನಮ್ಮ ಹೂವಿಲ್ಲದ ನಾರು ನಾ
ಓಡೋಡಿ ಬಾ ತಾಯಿಯೇ ಕೇಳೋಕೆ ನೋಡೋಕೆ ಈ ಕಂದನ, ಆಕ್ರಂದನ
ಅಮ್ಮ ಅಮ್ಮ ಅಮ್ಮ ನನ್ನಮ್ಮ

ಮರಿ ಬಿಟ್ಟು ಹಾರೋದೆ ಸರಿ ಅಂತ ಹೇಳೋದೆ
ಮಗ ಎಂದೂ ಸೋಲೋದೆ ಜಗ ತೂಗೋ ತಾಯಿಗೆ
ಸೋಲಲ್ಲು ಸುಖ ಕಾಣಲು ಬೇಕಮ್ಮ
ಅಮ್ಮ ನಿನ್ನ ಕಾವಲು ರೆಪ್ಪೇನೇ ಇರದಾದರೇ
ಒಪ್ಪೋದು ಹೇಗಮ್ಮ ಆ ಕಣ್ಣನು, ಆ ಕಣ್ಣನು
ಅಮ್ಮ ಅಮ್ಮ ಅಮ್ಮ ನನ್ನಮ್ಮ
ನನ್ನ ಬಿಟ್ಟು ಎಲ್ಲಿ ಹೋದೆಮ್ಮ
ಕೋಟಿ ದೈವ ನಿನ್ನ ಮುಂದೆ ಬೇಡವೇ ಬೇಡಮ್ಮ
ದಾಟಿ ಬಂದು ನೂರು ಗೋಡೆ ನನ್ನನು ನೋಡಮ್ಮ, ಜೋಗುಳ ಹಾಡಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ


ಚಿತ್ರ: ಬಿರುಗಾಳಿ.