ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿ ತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೆ ಹೇ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ಸುಳ್ಳು ಸುಳ್ಳೆ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಬ್ಬಲ್ಲಿ ಮುತ್ತಿಟ್ಟೋರು ಯಾರು
ಕೆನ್ನೆ ನಿಂದ ಮುತ್ತು ನಂದ
ಬಗೆ ಹರಿಯದ ಒಗಟು ಇದೂ
ಮೊದಲು ಅಪ್ಪಿಕೊಂಡ, ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸಿಗುಟ್ಟಿದ್ದು ಯಾರೂ.
ಈ ವಿರಹದಲಿ ಅಡಗಿದೆಯೊ,
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯಾ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನಾ
ಓ ಓ ಓ ಓ ಸಣ್ಣ ತಪ್ಪಿಗಾಗಿ, ಮಾತು ಸತ್ತು ಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ದು ಯಾರು
ತಪ್ಪು ನಿಂದ? ಒಪ್ಪು ನಂದ?
ಕೊನೆಗಾಣದ ಒಗಟು ಇದೂ
ಮುಂಜಾನೆ ನಿದ್ರೆಲಿ ನಾ ಹೇಳಲಾರದ ಕನಸ ನೀ ಸಿಕ್ಕಾಗ ಮಾತಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ
ಕನಸು ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್
Showing posts with label inthi ninna preethiya. Show all posts
Showing posts with label inthi ninna preethiya. Show all posts
Monday, 26 May 2008
Wednesday, 23 April 2008
ಹೂ ಕನಸ ಜೋಕಾಲಿ...

ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲಿ ಜೊತೆಗಿರುವೆ ಚಿತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ನಾ ನಿಂತ ನೆಲವನು ಕಾಲ ಬೆರಳು ತಬ್ಬಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕನಲುತಿದೆ ನಸು ನಾಚಿಕೆಯೋ
ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ, ಜೋಕಾಲಿ.
ಬಿಡದ ಕನಸು ಬಿಡದ ನೋವು ಬಿಡದ ಮಿಡಿತ ಕೊನೆಯವರೆಗೆ
ಜೀವದ ಜೊತೆಗೆ ಎದೆಯ ಸುಡುವ ತಂಪು ನೆನಪುಗಳು
ಪ್ರತಿಯೊಬ್ಬರಲೂ ಕಾಡುವ ಅವಳು ಬೆಂಬಿಡದಂತಹ ಆ ನಗುವಿನ ನೆರಳು
ನಗುತ ಕೊಲುವ ಒಲವೋ.
ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ, ಹೂ ಕನಸ ಜೋಕಾಲಿ.
ಮೊದಲ ನೋಟ ಮೊದಲ ಮಾತು ಮೊದಲ ಸ್ಪರ್ಷ ಮೊದಲ ಆಹಾ
ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪೋ
ಈ ಮೊಗ್ಗನ್ನ ಹೂವಾಗಿಸು ಬಾರೋ ನಾನಾಗುವೆನು ನಿನ್ನ ಹೂವಿನ ತೇರು
ಹೆಣ್ಣ ಮನವ ತಿಳಿಯೋ.
ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ
ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ
ಬಿಡದ ನಿನ್ನ ನಗೆಯ ಜೊತೆಗೆ ಮುಗಿದ ದಾರಿಯೋ
ಮಡಿದ ಕನಸಿನ ಮುಗಿಲಿಗೆ ಮೌನ ದೇಣಿಯೋ
ಈ ನಗುವ ಮುಖದಲ್ಲಿ ಬರಿ ನೋವಿದೆಯೋ
ಉಸಿರಾಡೋ ಶವಕಿಲ್ಲಿ ಸಾವಿದೆಯೋ
ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ, ಅಲೆಮಾರಿ.
ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್
Subscribe to:
Posts (Atom)