
ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರಾ ಥರಾ ಕೇಳಲೊಂಥರಾ ಥರಾ
ಕಣ್ಣಿಗೇನು ಕಾಣದೆ ಸ್ಪರ್ಶವೇನೂ ಇಲ್ಲದೆ
ಏನು ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನದೇ ನೂರು ನೆನಪು ಮೂಡಿದೆ
ನನ್ನಲೇನೊ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರಾ..
ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೆ ಇರದ ಉತ್ಸವ ಪ್ರೀತಿ ಒಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತು ಕಾದವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸು ಕಾಡಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರಾ..
ಚಿತ್ರ: ಮುಸ್ಸಂಜೆ ಮಾತು
ಬರೆದವರು: ರಾಮ್ ನಾರಾಯಣ್
No comments:
Post a Comment