
ಅವಳಂದ್ರೆ ನಂಗೆ ತುಂಬಾ ಇಷ್ಟ
ಅವಳಿಗೂ ನಾನಂದ್ರೆ ಇಷ್ಟ... ಅನ್ಸುತ್ತೆ
ಖುಷಿಯಾಗಿದೆ ಏಕೋ ನಿನ್ನಿಂದಲೇ
ನಾ ನೋಡದೆ ನಿನ್ನನು ಇರಲಾರೆನೇ
ಒಮ್ಮೆ ನೀ ನಕ್ಕರೇ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೇ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ
ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ
ಆದರೂ ಮರೆತೇ ಇಲ್ಲ ನಾ ನಿನ್ನ
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೆ ನಿನ್ನನೇ ನೋಡುವೆ
ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ನ ಹೆಸರ ನಾ ಬರೆವೆ
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ
ನಿನ್ನ ಸ್ಪರ್ಶವ ಸವಿದೆ
ನಿನ್ನಲ್ಲೆ ನಾ ಬೆರೆತೆ
ಆ ಮಂಜಿನ ಹನಿಗಳು ನೀನಲ್ಲವೆ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೆ ನಿನ್ನನೇ ನೋಡುವೆ
ಅವನಂದ್ರೆ ನಂಗೆ ತುಂಬಾ ಇಷ್ಟ
ಅವನಿಗೂ ನಾನಂದ್ರೆ ಇಷ್ಟ... ಅನ್ಸುತ್ತೆ
ಚಿತ್ರ: ತಾಜ್ ಮಹಲ್
1 comment:
yo.. attractive !
Post a Comment