May 24th, Saturday, ನಮ್ಮ gang ಹೊರಟಿದ್ದು ಭೀಮೇಶ್ವರಿಗೆ. ಅವಿನಾಶ, ಅಭಿಲಾಶ, ಪ್ರವೀಣ, ಶ್ಯಾಮ್, ಮತ್ತು ಗಣೇಶ್ ಜೊತೆಗೆ ನಮ್ಮ ನಮ್ಮ 3 Pulsar bikesನಲ್ಲಿ NH-209ನಲ್ಲಿ ಬೆಂಗಳೂರಿಂದ ಹೊರಟ ನಾವು ಕನಕಪುರ, ಸಾತನೂರು ಆಗಿ ಮುತ್ತತ್ತಿಗೆ ಬಂದೆವು. ಈ ಸ್ಥಳ ಕನಕಪುರದಿಂದ ಸುಮಾರು 25ರಿಂದ 30Km ದೂರ ಇರಬಹುದು. ಭೀಮೇಶ್ವರಿ ಇರುವುದು ಮುತ್ತತ್ತಿಯಲ್ಲೆಯೇ.
ಕಾವೇರಿ ನದಿಯು ಹರಿದು ಹೋಗುವ ಈ ಸ್ಥಳದಲ್ಲಿ ಬೆಂಗಳೂರಿನಿಂದಲೇ advance booking ಮಾಡಿ ಬಂದವರಿಗೆ Kaveri Fishing Campನಲ್ಲಿ stay ಮಾಡುವ ಸೌಲಭ್ಯವಿದೆ. ಹಾಗೆಯೇ ಒಳ್ಳೆಯ ನೀರಿರುವ ಸಮಯದಲ್ಲಿ rafting ಮಾಡಲೂ ಅನುಕೂಲಗಳಿವೆ. Govt. of Karnataka undertaking ಇಲ್ಲಿ ಪ್ರವೇಶ ಸಿಗಲು ಮುಂಗಡ ಕಾದಿರಿಸುವಿಕೆ ಅಗತ್ಯ. ಹಾಗೆಯೇ ಇಲ್ಲಿ Elephant Ride ಕೂಡ ಇದೆ.
Water level ತಕ್ಕ ಮಟ್ಟಿಗೇ ಇದ್ದ ಕಾವೇರಿ ತೀರದಲ್ಲಿ ಸ್ವಲ್ಪ ಹೊತ್ತಿನ ಮಟ್ಟಿಗೆ ದಣಿವಾರಿಸಿಕೊಂಡು ಹಾಗೆಯೇ ಕೆಲವು Photo sessions ಮಾಡ್ಕೊಂಡ್ವಿ.
ಆಗಲೇ ಮಧ್ಯಾಹ್ನವಾಗಲು ತುಂಬಾ ಹಸಿದಿದ್ದ ನಾವು 8Km ಹಿಂದೆ ಇದ್ದ ಸಾತನೂರಿಗೆ ಬಂದೆವು. ಮುತ್ತತ್ತಿಯಲ್ಲಿ ಯಾವುದೇ ಅಂಗಡಿ, ಹೋಟೆಲುಗಳ ಸೌಲಭ್ಯವಿಲ್ಲದ್ದರಿಂದ ನಮಿಗೆ ಬೇರೆ alternatives ಇರಲಿಲ್ಲ. ಸಣ್ಣ ಹೋಟೆಲಲ್ಲಿ curd rice, ಬಾಳೆಹಣ್ಣುಗಳಲ್ಲೇ ಊಟ ಮಾಡಿದ ನಮಿಗೆ ಹಸಿವು ನಿಂತರೂ ಪಯಣದ ಹಸಿವು ನಿಂತಿರಲಿಲ್ಲ. ಹತ್ತಿರದಲ್ಲೇ ಸುಮಾರು 12Km ದೂರದಲ್ಲಿ ಮೇಕೆದಾಟು ಇರುವುದನ್ನು ತಿಳಿದ ನಾವು ಅತ್ತ ಕಡೆಗೆ ಪಯಣ ಮುಂದುವರಿಸಿದೆವು. ಅಷ್ಟರಲ್ಲಾಗಲೇ ಮೋಡ ಕವಿದ ವಾತಾವರಣವಿದ್ದು ಸ್ವಲ್ಪದರಲ್ಲೇ ಮಳೆಯೂ ಶುರುವಾಯಿತು.
ಸಂಗಮ ತಲುಪಿದ ನಾವು ಮೇಕೆದಾಟು ಹೋಗಲು ಇನ್ನು ನಾಲ್ಕೇ Km ಇರುವುದು. ಆದರೆ ಇಲ್ಲಿಂದ ನಾವು bikeನಲ್ಲಿ ಹೋಗುವಂತಿಲ್ಲ. ಕಾವೇರಿ ಹೊಳೆಯನ್ನು ತೆಪ್ಪಗಳ ಸಹಾಯದಿಂದ ದಾಟಿ ಆಚೆ ಬದಿಯಲ್ಲಿರುವ ಬಾಡಿಗೆ Jeepಗಳ ಸಹಾಯ ಪಡೆಯಬೇಕು. ಆಗಲೇ ಮಳೆಯೂ ಇದ್ದಿದ್ದರಿಂದ ನಮಿಗೆ ಯಾರಿಗೂ ಅತ್ತ ಕಡೆ ನಮ್ಮ bikeನ್ನು ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ದಾರಿಯಲ್ಲೇ ನಾವು ಚುಂಚಿ ಜಲಪಾತದ ಮಾರ್ಗ ಸೂಚಿಯನ್ನು ನೋಡಿದ್ದು ಎಲ್ಲರೂ ಜಲಪಾತಕ್ಕೆ ಹೋಗಲು ನಿರ್ಧರಿಸಿದೆವು. ಸಾತನೂರಿಂದ ಮೇಕೆದಾಟು ಬರುವ ದಾರಿಯಲ್ಲಿ ಎಡಕ್ಕೆ ಸುಮಾರು 6Km ಹೋಗಲು ಈ ಜಲಪಾತ ಬರುವುದು.
ಸಾಧಾರಣದಿಂದ ಸುಮಾರು ನೀರು ಇದ್ದ ಚುಂಚಿ ನೋಡಲು ರಮ್ಯ ಮನೋಹರವಾಗಿತ್ತು. ಬಂಡೆಗಳ ಮೇಲಿಂದ ಕೆಳಗಿಳಿಯುತ್ತಾ ಸುಮಾರು ಅರ್ಧದಷ್ಟು ಜಲಪಾತದ ಕೆಳಗೆ ಇಳಿದು ನೋಡಿದೆವು. ಅಲ್ಲಿಂದ ನಂತರ ಬೆಂಗಳೂರಿಗೆ ಹಿಂತಿರುಗಲು ದಾರಿಯುದ್ದಕ್ಕೂ ಮಳೆಯ ಸಾಥ್ ನಮ್ಮನ್ನು ಬಿಡಲಿಲ್ಲ.
No comments:
Post a Comment