Tuesday, 4 August 2009

ಅಮ್ಮ ಅಮ್ಮ ನನ್ನಮ್ಮ..

ತಂದಾನೆ.. ಓ..
ತಂದಾನೆ ತಾನೇನಾನಿ ತಾನಾನಾನಾನೋ
ಆರಿರಾರಿರೋ ಆರಿ ರಾರಿರಾರಿರೋ
ಆರಿರಾರಿರೋ ರಾರಿ ರಾರಿರಾರಿರೋ

ಅಮ್ಮ ಅಮ್ಮ ಅಮ್ಮ ನನ್ನಮ್ಮ
ನನ್ನ ಬಿಟ್ಟು ಎಲ್ಲಿ ಹೋದೆಮ್ಮ
ಕೋಟಿ ದೈವ ನಿನ್ನ ಮುಂದೆ ಬೇಡವೇ ಬೇಡಮ್ಮ
ದಾಟಿ ಬಂದು ನೂರು ಗೋಡೆ ನನ್ನನು ನೋಡಮ್ಮ, ಜೋಗುಳ ಹಾಡಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ
ನನ್ನ ಬಿಟ್ಟು ಎಲ್ಲಿ ಹೋದೆಮ್ಮ

ಕೊಡೋರಿಲ್ಲ ಕೈ ತುತ್ತು ಇಡೋರಿಲ್ಲ ಹೂ ಮುತ್ತು
ತೊಡೆ ಮೇಲೆ ಕೂಸಾಗೋ ಮಹಾಭಾಗ್ಯ ಮಣ್ಣಾಯ್ತು
ನೀನಿಲ್ಲದ ಕಾರಣ ನನ್ನಮ್ಮ ಹೂವಿಲ್ಲದ ನಾರು ನಾ
ಓಡೋಡಿ ಬಾ ತಾಯಿಯೇ ಕೇಳೋಕೆ ನೋಡೋಕೆ ಈ ಕಂದನ, ಆಕ್ರಂದನ
ಅಮ್ಮ ಅಮ್ಮ ಅಮ್ಮ ನನ್ನಮ್ಮ

ಮರಿ ಬಿಟ್ಟು ಹಾರೋದೆ ಸರಿ ಅಂತ ಹೇಳೋದೆ
ಮಗ ಎಂದೂ ಸೋಲೋದೆ ಜಗ ತೂಗೋ ತಾಯಿಗೆ
ಸೋಲಲ್ಲು ಸುಖ ಕಾಣಲು ಬೇಕಮ್ಮ
ಅಮ್ಮ ನಿನ್ನ ಕಾವಲು ರೆಪ್ಪೇನೇ ಇರದಾದರೇ
ಒಪ್ಪೋದು ಹೇಗಮ್ಮ ಆ ಕಣ್ಣನು, ಆ ಕಣ್ಣನು
ಅಮ್ಮ ಅಮ್ಮ ಅಮ್ಮ ನನ್ನಮ್ಮ
ನನ್ನ ಬಿಟ್ಟು ಎಲ್ಲಿ ಹೋದೆಮ್ಮ
ಕೋಟಿ ದೈವ ನಿನ್ನ ಮುಂದೆ ಬೇಡವೇ ಬೇಡಮ್ಮ
ದಾಟಿ ಬಂದು ನೂರು ಗೋಡೆ ನನ್ನನು ನೋಡಮ್ಮ, ಜೋಗುಳ ಹಾಡಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ


ಚಿತ್ರ: ಬಿರುಗಾಳಿ.

Thursday, 30 July 2009

ಯಾರೂ ಹಾಡದ...

ಯಾರೂ ಹಾಡದ ಎಲ್ಲೂ ಕೇಳದ |೨|
ಮನದಾಳದ ಆಲಾಪವೇ ಎದೆಯಾಳದ ಆತಂಕವೇ
ಮಿಡುಕಾಡಿದೆ ಹುಡುಕಾಡಿದೆ ಹಾಡಾಗಿದೆ ಈಗ |೨|
ಯಾರೂ ಹಾಡದ ಎಲ್ಲೂ ಕೇಳದ |೨|

ನಿನ್ನ ಕಣ್ಣ ದೋಣಿಯಲ್ಲೆ ನನ್ನ ಕನಸುಳಿದಿದೆ
ನಿನ್ನ ಮಿಡಿವ ಹೃದಯದಲ್ಲೆ ನೂರು ಮಾತುಳಿದಿದೆ
ಕಾಣದಂತಹ ತಾಣವನ್ನ ಸೇರುವಂತಹ ಆಸೆಗೆ
ಕಾದಿದೆ ಕಂಬನಿ ಒರೆಸುವ ಕೈಗೆ
ದೋಣಿಯೆ ಆಸರೆ ದೂರದ ಯಾನಕೆ
ಹರಿಯುವ ಮೊರೆಯುವ ತೊರೆಯೊಳಗೆ
ಯಾರೂ ಹಾಡದ ಎಲ್ಲೂ ಕೇಳದ |೨|

ನಿಮ್ಮ ದಾರಿ ನೀವೆ ತುಳಿದು ಸೇರ ಬೇಕು ಗುರಿ
ಬೆಳಗು ಗರಿಯ ಬಣ್ಣವೆಲ್ಲ ಹಾಡಿ ನಾ ಹಾಜರಿ
ಬಾನಿನ ಬಯಲಿಗೆ ಸಾರಸ ಹಾರಿವೆ
ಊರನು ಸೇರಲು ದಾರಿಯೊ ನೂರಿವೆ
ಪ್ರೀತಿಯೇ ಆಸರೆ ಬಾಳಿನ ಪಯಣಕೆ
ಮರಗಳ ನೆರಳಿವೆ ಬಿಸಿಲೊಳಗೆ
ಯಾರೂ ಹಾಡದ ಎಲ್ಲೂ ಕೇಳದ |೨|


ಚಿತ್ರ: ಕಾರಂಜಿ

Friday, 3 July 2009

ಗೊತ್ತಿದ್ರೆ ತಿಳಿಸಿ..

ಪ್ರಶ್ನೆ:
ನಮ್ಮ ಬೆರಳ ತುದಿಯನ್ನು ಸೂಜಿ ಮೊನೆಯಿಂದ ಚುಚ್ಚಿದಾಗ ರಕ್ತ ಹೊರಗೆ ಬರುತ್ತಲ್ಲಾ, ಅದು ಯಾಕೆ ಬರುತ್ತೆ?

ಉತ್ತರ ೧:
ಚುಚ್ಚಿದ್ದು ಯಾರು ಅಂತ ನೋಡೋಕೆ ರಕ್ತ ಹೊರಗೆ ಬರುತ್ತೆ.

ಉತ್ತರ ೨:
ಹಾಗೆನೇ ಒಳಗಡೆ ಇದ್ದು ಬೋರಾಗಿರುತ್ತೆ, ಅದಕ್ಕೆ ಹೊರಗಡೆ ಬರುತ್ತೆ.

Monday, 22 June 2009

ನೆನೆದು ನೆನೆದು ನೋಡು..

ನೆನೆದು ನೆನೆದು ನೋಡು ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ
ಕಣ್ಣ ತೆರೆದು ಓದೊ ಮುನ್ನ ಉರಿವ ಓಲೆ ಆಗಿ ಹೋದೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ

ನಾವು ಕುಳಿತ ಮರಗಳ ನೆರಳು ಹೇಳಿ ಕೊಳಲು ನಮ್ಮ ಕಥೆಯ
ಉದುರಿ ಹೋದ ಹೂವು ಘಮಿಸಿದೆ
ಸುದ್ದಿ ತಿಳಿಸೊ ಗೆಜ್ಜೆಯ ನಾದ ಕೇಳಿಸುತಿದೆ ದಾರಿಗೂ ಈಗ
ಒಡೆದ ಬಳೆಯ ಸದ್ದು ಘಲ್ಲಿದೆ
ಅಂಗೈಯ ಬೆಚ್ಚಗೆ ಇರಿಸೊ ನನ್ನ ಬೆರಳು ನಿನ್ನ ಕೈಲಿ
ಹೆಗಲಿಗೊರಗಿ ಹಗಲನು ಮರೆಸೊ ಕಥೆಗಳೆಲ್ಲ ಖಾಲಿ
ಮೊದ ಮೊದಲ ಕನಸನು ಹೇಳುವೆ ತೆರೆಯೋ ಕಂಗಳ

ಮಧುರವಾದ ಮಾತುಗಳೆಲ್ಲ ಬೆರೆತು ಹೋಯ್ತು ನಿನ್ನ ಮಾತಲ್ಲಿ
ಜಗವೆ ಮುಳುಗೆ ಮಾತು ಅಳಿಯದೆ
ಚದುರದಂತ ನೆನಪಿಗೆ ಈಗ ಉತ್ತರಿಸಲು ಬಂದಿಹೆ ನಲ್ಲ
ನನ್ನ ಜೀವ ನಿನ್ನ ಮರೆವುದೆ..
ನನ್ನ ಹೊಂದೆ ಬರುವ ನೆರಳ ಇಲ್ಲೇ ಅಗಲಿ ಹೋದೆ
ಕಣ್ಣ ಮುಂದೆ ಸಾಕ್ಷಿಯು ಇರಲು ಹೇಳಲೆಂದೆ ಬಂದೆ
ನಾ ಮತ್ತೆ ಸಿಗುವೆನು ಪ್ರಿಯತಮ ಹೃದಯ ಬಯಸಿದೆ
ನೆನೆದು ನೆನೆದು ನೋಡು ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ.


ಚಿತ್ರ: ಗಿಲ್ಲಿ

Wednesday, 3 June 2009

ಮರಳಿ ಮರೆಯಾಗಿ...

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..
ಮರಳಿ ಮರೆಯಾಗಿ ತರಲಿ ತಂಗಾಳಿ ಹೊಮ್ಮಿ ಹೊಸತಾದ ಹರುಷ.. ಹರವು
ಹಸಿ ಖುಶಿ ಕವನ ಕನಸನಿ ನೀ ನನಸಾಗಿಸಿ..
ಕಲರವ ನೀ ಪಸರಿಸಿ.. ನೀ ಇನಿಯನೆ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..

ರಿಂಗಣ ಹೊಸತನ.. ತನುವ ಈ ನರ್ತನ
ತಿಂಗಳ ಬೆಳಕನ ಕಂಡೆ ಈ ಸಂಜೆ ನಾ..
ಧರೆಗಿಳಿದ ಕಿನ್ನರ ನೀ.. ವಿಸ್ಮಯದ ಕಿರಣವೆ ನೀ..
ನನ್ನ ಕನಸುಗಳ ತೇಲಾಡಿ ಕುಣಿಯುತಿದೆ..
ನೀ ಇನಿಯನೇ.. ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..

ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೇ..
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ.. ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೀಳಿ ಮುಡಿಗಿರಿಸು
ನೀ ಇನಿಯನೇ.. ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..


ಚಿತ್ರ: ಸವಾರಿ.

Monday, 4 May 2009

ಅಲೆ ಅಲೆ ಅಲೆಯೋ..


ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಎದೆಯಲಿ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಮಳೆ ಮಳೆ ಮಳೆಯೋ
ಪುಳಕದ ಮಳೆ ಮಳೆ ಮಳೆ ಮಳೆ ಮಳೆ ಮಳೆಯೋ
ಮೊದಲ ಸಾರಿ ಇಂತ ಸಂತೋಷವೊಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಎಲ್ಲಿ ತಿಳಿಯದಾದೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ

ಅವಳು ಎದುರಲಿ ಬಂದರೆ ಹೃದಯ ಕುಣಿವುದು ಬೇಗನೆ
ಹೊಸ ಹೊಸ ಹೊಸತರ ಸಡಗರ ಅವನಿರೊ ಕ್ಷಣಗಳು ಸುಮಧುರ
ಕಣ್ಣೊಂದಾಗಿದೆ ಕನಸೊಂದಾಗಿದೆ ಜೀವ ಜಾರುತಿದೆ
ಹಾರೋ ಹಾಗಿದೆ ನೂರೊಂದಾಗಿದೆ ಹೇಳೋಕೆ ಬರದೆ
ಕಣ್ಣೊಂದಾಗಿದೆ ಕನಸೊಂದಾಗಿದೆ ಜೀವ ಜಾರುತಿದೆ
ಹಾರೋ ಹಾಗಿದೆ ನೂರೊಂದಾಗಿದೆ ಹೇಳೋಕೆ ಬರದೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಪುಳಕದ ಮಳೆ ಮಳೆಯೋ

ನನಗೆ ಸಿಗುತಿದೆ ಸೂಚನೆ ಮನಸು ಕೆಡುತಿದೆ ಮೆಲ್ಲನೆ
ಪದೆ ಪದೆ ಅದೆ ಅದೆ ಯೋಚನೆ ಸವಿ ಸವಿ ಸವಿ ಸವಿ ಯಾತನೆ
ಮಗುವಂತಾಗಿದೆ ಮುಗಿಲಂತಾಗಿದೆ ನನ್ನ ಈ ಮನಸು
ಕುಣಿವಂತಾಗಿದೆ ಖುಷಿ ಹೆಚ್ಚಾಗಿದೆ ಏನಿಂತ ಸೊಗಸು
ಮಗುವಂತಾಗಿದೆ ಮುಗಿಲಂತಾಗಿದೆ ನನ್ನ ಈ ಮನಸು
ಕುಣಿವಂತಾಗಿದೆ ಖುಷಿ ಹೆಚ್ಚಾಗಿದೆ ಏನಿಂತ ಸೊಗಸು
ಅಲೆ ಅಲೆ ಅಲೆ ಎದೆಯಲಿ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ

ಮೊದಲ ಸಾರಿ ಇಂತ ಸಂತೋಷವೊಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಎಲ್ಲಿ ತಿಳಿಯದಾದೆ
ಅಲೆ ಅಲೆ ಅಲೆ ಎದೆಯಲ್ಲಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಪುಳಕದ ಮಳೆ ಮಳೆಯೋ


ಚಿತ್ರ: ಸವಾರಿ.

Saturday, 2 May 2009

movie: Bhale Dongalu

I watched movie Bhale Dongalu, a telugu movie. And I finished it in half an hour. Actually I got the movie copied from my colleagues and I did not see any movie-reviews before. Bcoz, if I see the review I won't be watching it for most of the time ;).
Within few scenes I came to know that it a telugu remake of the bollywood movie Bunty Aur Bubly. And I somehow spent half an hour by forwarding and watching Ileana's moves :). In this Charmee really tried her best in the item number which was done originally in the original film by Aishwarya Rai for the song Kajrare.