Monday, 25 October 2010

ಶಿವಾಂತ ಹೋಗುತಿದ್ದೆ..


ಶಿವಾಂತ ಹೋಗುತಿದ್ದೆ ರೋಡಿನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲ್ಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲ್ಲಿ
ನೀ ಕಂಡೆ ಸೈಡಿನಲ್ಲಿ
ಕಂಡು ಕಂಡು ಬಿದ್ದಹಂಗಾಯ್ತು ಹಳ್ಳದಲ್ಲಿ
ಕಂಬಳಿ ಹುಳ ಬಿಟ್ಟಹಂಗಾಯ್ತು ಹಾರ್ಟಿನಲ್ಲಿ
ಕಚಗುಳಿ ಇಟ್ಟಹಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲ್ಲಿ |

ಟೋಪು ಗೇರು ಹಾಕಂಗಿಲ್ಲ
ಸುಮ್ನೆ ಬ್ರೇಕು ಹೊಡಿಯಂಗಿಲ್ಲ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದಕ್ಕು
ನಂಗೆ ಯಾಕೆ ಹೀಂಗೆ ಅನ್ನೋ ಅನಿಸುವುದು
ಒಂದು ಮಾತು ಕೇಳಲಿಲ್ಲ
ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನ್ನು ಕೊಂಡು ಕೊಂಡುತ್ತಾಳೆ
ಮಾಡದೆ ಪಾಯವ ಕೂಡಿಬಿಟ್ಟು
ಹೂವಿನಂತ ಹುಡುಗ ನಾನು ತುಂಬ ಮೃದು
ಹೆಣ್ಮಕ್ಳೆ ಸ್ಟ್ರಾಂಗು ಗುರು |

ಉಣ್ಣಲಿಲ್ಲ ತಿನ್ನಲಿಲ್ಲ
ಮಟ ಮಟ ಮಧ್ಯಾಹ್ನವೆ
ಒಂದು ಬಿಟ್ಟು ಹಿಂದುಗಡೆ ಸೀಟಿನಲ್ಲಿ
ನಾ ಹುಡುಕಬೇಕು ನಮ್ಮದೆ ರೂಟಿನಲ್ಲಿ
ಒಂದು ಕೇಜಿ ಅಕ್ಕಿ ರೇಟು
ಮೂವತ್ತು ರೂಪಾಯಿ ಆಗಿ ಹೋಯ್ತು
ಈಸಿಯಾಗಿ ಹೇಗೆ ನಾನು ಪ್ರೀತಿಸಲಿ
ಅದರಲ್ಲೂ ಮೊದಲನೇ ಭೇಟಿಯಲಿ
ರೇಶನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ಸಂಸಾರ ಬೇಕ ಗುರು ||


ಚಿತ್ರ: ಜಾಕಿ

Wednesday, 29 September 2010

ನೀನೆಂದರೆ ನನ್ನೊಳಗೆ..


ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ
ಓ ಜೀವವೇ ಹೇಳಿ ಬಿಡು ನಿನಗೂ ಕೂಡ ಹೀಗೇನಾ ||

ತಂದೆನು ಪಿಸು ಮಾತು ಜೇಬಲ್ಲಿ ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈ ಮನ
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು
ನಿನ್ನ ನೆರಳು ಸುಳಿಯುವಲ್ಲೂ ಹೂವ ತಂದು ಸುರಿಯಲೇನು
ನಂಬಿಕುತ ಹೊಂಬ ನಾನು ನೀನು ಹೀಗೇನಾ ||

ಹೂವಿನ ಮಳೆ ನೀನು ಕನಸಲ್ಲಿ ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು
ಒಂದೆ ಕನಸು ಕಾಣುವಾಗ ನಾನು ನೀನು ಬೇರೆ ಏನು
ಶರಣು ಬಂದ ಚೋರ ನಾನು ನೀನು ಹೀಗೇನಾ ||


ಚಿತ್ರ: ಜಂಗ್ಲೀ

Monday, 2 August 2010

ನಲಿವ ಗುಲಾಬಿ ಹೂವೆ..

ನಲಿವ ಗುಲಾಬಿ ಹೂವೆ ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ ಬರಿಯೇ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ ಒಲವೋ ಛಲವೋ

ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ, ಇಂದೇಕೆ ದೂರಾದೆ?
ಹೀಗೇಕೆ ಮರೆಯಾದೆ?

ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೇ ನಿನಗಾಗಿ ನನಗಾಗಿ


ಚಿತ್ರ: ಆಟೋರಾಜ

Tuesday, 20 July 2010

ಸಂತೆಯಲ್ಲೇ ನಿಂತರೂನು..


ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೇ
ಸೇರಬಲ್ಲೆ ನಿನ್ನನ್ನೇ ನಾನು ಮಾತ್ರ ಬಲ್ಲೆ ನಿನ್ನನ್ನೇ

ಹೃದಯವೇ ಬಯಸಿದೆ ನಿನ್ನನೆ ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪನೆ ನೇಯುವೆ
ಸೆಳೆತಕೆ ಸೋಲುತ ಸನಿಹಕೆ ಕಾಯುವೆ

ಹೃದಯವೇ ಬಯಸಿದೆ ನಿನ್ನನೆ ತೆರೆಯುತ ಕನಸಿನ ಕಣ್ಣನೆ

ಜೀವಗಳ ಭಾಷೆಯಿದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ

ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರು ಕಾಯಿಸಿ ನೋಡು

ನಿನ್ನಿಂದ ನನ್ನ ನೀನೆ ಕಾಪಾಡು, ಹೃದಯವೇ |ಸಂತೆಯಲ್ಲೇ|

ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆನೆ ಕೈಯ ಹಿಡಿ ಇನ್ನು ಬಲವಾಗಿ

ನನ್ನಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ ನಾಳೆ ಬಾ ಎಂದು

ಆಗಲೇ ಬೇಡ ದೂರ ಇನ್ನೆಂದು, ಹೃದಯವೇ |ಹೃದಯವೇ|


ಚಿತ್ರ: ’ಕೃಷ್ಣ’ನ Love Story

Tuesday, 15 June 2010

ನೀನಾಡದ ಮಾತು ನನ್ನಲಿದೆ..


ನೀನಾಡದ ಮಾತು ನನ್ನಲಿದೆ ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ ಅಂದ ಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ ಸಮಯಾನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ ||

ಎಲ್ಲೆ ನಾ ನಿನ್ನ ಹೆಸರನ್ನು ಕಂಡಾಗ ನಿನ್ನನ್ನೆ ಕಂಡಂತೆ ಖಾಸ ಸಂತಸ
ಹೀಗೆ ನೀ ನನ್ನ ಬಳಿ ಸುಳಿವಾಗ ದೂರನೆ ನಿಲ್ಲುವುದು ಒಂದು ಸಾಹಸ
ಸದಾ ನಿನ್ನದೇ ಧ್ಯಾನ ಈ ಜೀವದಲ್ಲಿ ಈಗ ಕಣ್ಣಲ್ಲು ನಿಂದೇನೆ ಬಾಯಾರಿಕೆ
ಬಾ ಬೇಗ ಅಭಿಸಾರಕೆ ||

ನಿನ್ನ ಹೊರತೀಗ ನನಗೇನೂ ತಿಳಿದಿಲ್ಲ ಕೇಳುತ್ತ ನಾನಾದೆ ಇನ್ನೂ ಭಾವುಕ
ನೀನು ಕಣ್ಣುಜ್ಜಿ ಮತ್ತೊಮ್ಮೆ ನೋಡೀಗ ಈಗಂತೂ ಈ ಲೋಕ ಇನ್ನೂ ಮೋಹಕ
ಪ್ರತಿಯೊಂದು ಕ್ಷಣದಲ್ಲು ತಂಗಾಳಿ ಅಲೆಯಲ್ಲು ಒಂದಾಗಿ ಗೀಚೋಣ ನಾವೀಗಲೇ
ಈ ಪ್ರೇಮದ ದಾಖಲೆ ||


ಚಿತ್ರ: ’ಕೃಷ್ಣ’ನ Love Story

Sunday, 13 June 2010

ನೀ ಸನಿಹಕೆ ಬಂದರೆ..


ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಖರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು, ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೆ ಇರಲಿ ನಿನ್ನ ಮೌನ ನಂದೇ ಏನು

ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು, ನೀನೆ ಹೇಳು

ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಳ್ಳುವೆನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು
ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು

ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು, ನೀನೆ ಹೇಳು

ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು, ಹೇಳು ನೀನು


ಚಿತ್ರ: ಮಳೆಯಲ್ಲಿ ಜೊತೆಯಲ್ಲಿ

Thursday, 13 May 2010

ನೂರು ಜನ್ಮಕು..

ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೆ, ಒಲಿದೊಲಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು

ನೂರು ಜನ್ಮಕು...

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನು ಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಓ ಓ..
ನನ್ನೆದೆಯ ಬಾಂದಳದಿ
ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ
ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ


ಬಾ ಸಂಪಿಗೆ ಸವಿಭಾವ ಲಹರಿ
ಹರಿಯೆ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲ ಓ ಓ..
ಲೋಕದ ಸುಖವೆಲ್ಲ
ನಿನಗಾಗಿ ಮುಡಿಪಿರಲಿ
ಇರುವಂಥ ನೂರುಕಹಿ
ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗು ಕಣ್ಣಾಗಿ


ಚಿತ್ರ: ನೂರು ಜನ್ಮಕು, ಅಮೇರಿಕಾ ಅಮೇರಿಕಾ