Tuesday, 20 July 2010

ಸಂತೆಯಲ್ಲೇ ನಿಂತರೂನು..


ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೇ
ಸೇರಬಲ್ಲೆ ನಿನ್ನನ್ನೇ ನಾನು ಮಾತ್ರ ಬಲ್ಲೆ ನಿನ್ನನ್ನೇ

ಹೃದಯವೇ ಬಯಸಿದೆ ನಿನ್ನನೆ ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪನೆ ನೇಯುವೆ
ಸೆಳೆತಕೆ ಸೋಲುತ ಸನಿಹಕೆ ಕಾಯುವೆ

ಹೃದಯವೇ ಬಯಸಿದೆ ನಿನ್ನನೆ ತೆರೆಯುತ ಕನಸಿನ ಕಣ್ಣನೆ

ಜೀವಗಳ ಭಾಷೆಯಿದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ

ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರು ಕಾಯಿಸಿ ನೋಡು

ನಿನ್ನಿಂದ ನನ್ನ ನೀನೆ ಕಾಪಾಡು, ಹೃದಯವೇ |ಸಂತೆಯಲ್ಲೇ|

ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆನೆ ಕೈಯ ಹಿಡಿ ಇನ್ನು ಬಲವಾಗಿ

ನನ್ನಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ ನಾಳೆ ಬಾ ಎಂದು

ಆಗಲೇ ಬೇಡ ದೂರ ಇನ್ನೆಂದು, ಹೃದಯವೇ |ಹೃದಯವೇ|


ಚಿತ್ರ: ’ಕೃಷ್ಣ’ನ Love Story

Tuesday, 15 June 2010

ನೀನಾಡದ ಮಾತು ನನ್ನಲಿದೆ..


ನೀನಾಡದ ಮಾತು ನನ್ನಲಿದೆ ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ ಅಂದ ಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ ಸಮಯಾನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ ||

ಎಲ್ಲೆ ನಾ ನಿನ್ನ ಹೆಸರನ್ನು ಕಂಡಾಗ ನಿನ್ನನ್ನೆ ಕಂಡಂತೆ ಖಾಸ ಸಂತಸ
ಹೀಗೆ ನೀ ನನ್ನ ಬಳಿ ಸುಳಿವಾಗ ದೂರನೆ ನಿಲ್ಲುವುದು ಒಂದು ಸಾಹಸ
ಸದಾ ನಿನ್ನದೇ ಧ್ಯಾನ ಈ ಜೀವದಲ್ಲಿ ಈಗ ಕಣ್ಣಲ್ಲು ನಿಂದೇನೆ ಬಾಯಾರಿಕೆ
ಬಾ ಬೇಗ ಅಭಿಸಾರಕೆ ||

ನಿನ್ನ ಹೊರತೀಗ ನನಗೇನೂ ತಿಳಿದಿಲ್ಲ ಕೇಳುತ್ತ ನಾನಾದೆ ಇನ್ನೂ ಭಾವುಕ
ನೀನು ಕಣ್ಣುಜ್ಜಿ ಮತ್ತೊಮ್ಮೆ ನೋಡೀಗ ಈಗಂತೂ ಈ ಲೋಕ ಇನ್ನೂ ಮೋಹಕ
ಪ್ರತಿಯೊಂದು ಕ್ಷಣದಲ್ಲು ತಂಗಾಳಿ ಅಲೆಯಲ್ಲು ಒಂದಾಗಿ ಗೀಚೋಣ ನಾವೀಗಲೇ
ಈ ಪ್ರೇಮದ ದಾಖಲೆ ||


ಚಿತ್ರ: ’ಕೃಷ್ಣ’ನ Love Story

Sunday, 13 June 2010

ನೀ ಸನಿಹಕೆ ಬಂದರೆ..


ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಖರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು, ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೆ ಇರಲಿ ನಿನ್ನ ಮೌನ ನಂದೇ ಏನು

ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು, ನೀನೆ ಹೇಳು

ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಳ್ಳುವೆನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು
ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು

ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು, ನೀನೆ ಹೇಳು

ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು, ಹೇಳು ನೀನು


ಚಿತ್ರ: ಮಳೆಯಲ್ಲಿ ಜೊತೆಯಲ್ಲಿ

Thursday, 13 May 2010

ನೂರು ಜನ್ಮಕು..

ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೆ, ಒಲಿದೊಲಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು

ನೂರು ಜನ್ಮಕು...

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನು ಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಓ ಓ..
ನನ್ನೆದೆಯ ಬಾಂದಳದಿ
ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ
ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ


ಬಾ ಸಂಪಿಗೆ ಸವಿಭಾವ ಲಹರಿ
ಹರಿಯೆ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲ ಓ ಓ..
ಲೋಕದ ಸುಖವೆಲ್ಲ
ನಿನಗಾಗಿ ಮುಡಿಪಿರಲಿ
ಇರುವಂಥ ನೂರುಕಹಿ
ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗು ಕಣ್ಣಾಗಿ


ಚಿತ್ರ: ನೂರು ಜನ್ಮಕು, ಅಮೇರಿಕಾ ಅಮೇರಿಕಾ

Sunday, 7 March 2010

ಮೌನಿ ನಾನು..


ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸೊಂಥರಾ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನೊ ಅರಿಯೆನು |

ತೇಲಿ ಬಂದ ಸವಿ ಸೋನೆ ನೀನು
ಕಲ್ಲಿನಂಥ ಹೃದಯದಲ್ಲಿ ಹೂವ ಬೆಳೆಸಿದೆ
ಮೋಡವಿರದ ಸುಡುವಾನುದಾರಿ
ಮಳೆಯ ಬಿಲ್ಲಿನಂತೆ ನೀನು ಬಣ್ಣ ಚೆಲ್ಲಿದೆ
ಸೆಳೆದೆ ನೀ ಈ ನನ್ನ ಒಲವಿನೂರಿಗೆ
ಇಳಿದೆ ನೀ ಈ ನನ್ನ ಎದೆಯ ಗೂಡಿಗೆ
ನಂಗು ಒಂದು ಮನಸುಂಟು ಎಂದು
ಅರಿವಾಗಿ ಹೋದ್ದು ಇಂದು ನನಗೆ ನಿನ್ನಿಂದಾನೆ |

ನೂರು ಸಾರಿ ನಿನ್ನ ನೋಡಿ ನೋಡಿ
ತಿರುಗಿ ತಿರುಗಿ ನೋಡುವಾಸೆ ನನ್ನ ಕಾಡಿದೆ
ನಾವು ಸೇರಿ ನಡೆವಾಗ ದಾರಿ
ಎಂದು ಎಲ್ಲು ಮುಗಿಯಬಾರದೆಂದು ಅನಿಸಿದೆ
ಕನಸೆ ನೀ ಬಾ ನನ್ನ ಹೃದಯ ತುಂಬಿಕೋ
ಸೊಗಸೇ ನೀ ಬಾ ನನ್ನ ಬದುಕ ಸೇರಿಕೋ
ನನ್ನ ನಾನೆ ಮರೆವಂತೆ ಮಾಡೋ
ನಿನದೆಂಥ ಮೋಡಿ ನನ್ನ ತುಂಬ ನೀನೆ |


ಚಿತ್ರ: ಸೂರ್ಯಕಾಂತಿ

Sunday, 7 February 2010

ಮುಂಜಾನೆ ಮಂಜಲ್ಲಿ..


ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿ ತಂಪಲ್ಲಿ
ಓ ಒಲವೆ ನೀನೆಲ್ಲಿ ಹುಡುಕಾಟ ನಿನಗಿನ್ನೆಲ್ಲಿ
ನನ್ನೆದೆಯೊಳಗೆ ನೀ ಇಳಿದು ಕ್ಷಣ ಮನದ ಮೌನ ಮುರಿದು
ಬಿಸಿಯುಸಿರನ್ನು ನೀ ಬಗೆದು ನಿಟ್ಟುಸಿರನ್ನು ನೀ ತೆಗೆದು
ನನ್ನೊಮ್ಮೆ ಆವರಿಸು ಈ ಬೇಗೆ ನೀ ಹರಿಸು
ಮನದಾಳದ ಉಲ್ಲಾಸ ನೀ
ಕುಂತಲ್ಲು ನೀನೇ ನಿಂತಲ್ಲು ನೀನೇ ಎಲ್ಲೆಲ್ಲೂ ನೀನೇ ಸಖಿ
ಕಣ್ಣಲ್ಲು ನೀನೇ ಕನಸಲ್ಲು ನೀನೇ ಎಲ್ಲೆಲ್ಲೂ ನೀನೇ ಸಖಿ
ನನ್ನ ನಿನ್ನೆಗಳು ನೀನೇ ನಾಳೆಗಳು ನೀನೇ ಎಂದೆಂದು ನೀನೇ ಸಖಿ
ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ

ನನ್ನೆಲ್ಲಾ ಕನಸನ್ನು ನಿನದೆಂದು ನೀ ತಿಳಿದಿದ್ದೆ
ನೂರೆಂಟು ನೋವಲ್ಲು ನೀ ಬಂದು ಜೊತೆಗಿದ್ದೆ
ಕಾರ್ಮೋಡ ಕವಿದ ಮನಕೆ ಹೊಸ ಬೆಳಕು ತಂದು ಸುರಿದೆ
ನಿನಗಾಗಿ ನಾನು ನನ್ನ ಬದುಕೆಲ್ಲ ಮುಡಿಪು ಎಂದೆ
ಈಗೆಲ್ಲಿ ನೀ ಹೋದೆ ಕನಿಕರಿಸಿ ನೆನಪಾದೆ
ಎದೆಗೂಡಿನ ಉಸಿರು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೇ ಎಲ್ಲೆಲ್ಲು ನೀನೇ ಸಖಿ
ನೋವಲ್ಲು ನೀನೇ ನಗುವಲ್ಲು ನೀನೇ ಎಲ್ಲೆಲ್ಲೂ ನೀನೇ ಸಖಿ
ನನ್ನ ನಿನ್ನೆಗಳು ನೀನೇ ನಾಳೆಗಳು ನೀನೇ ಎಂದೆಂದು ನೀನೇ ಸಖಿ
ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ

ನೀನಿಲ್ಲದೆ ಬಾಳೆ ಬರಡು
ನಿನಗಾಗಿ ನನ್ನ ಬದುಕೆ ಮುಡಿಪು
ನೀನಿಲ್ಲದ ಬದುಕೇನಿದು ಕೊಲ್ಲು ನನ್ನ
ಕುಂತಲ್ಲು ನೀನೇ ಬಿಸಿಲಲ್ಲು ನೀನೇ ಎಲ್ಲೆಲ್ಲೂ ನೀನೇ ಸಖಿ
ಹಸಿರಲ್ಲು ನೀನೇ ಉಸಿರಲ್ಲು ನೀನೇ ಎಲ್ಲೆಲ್ಲೂ ನೀನೇ ಸಖಿ
ನನ್ನ ನಿನ್ನೆಗಳು ನೀನೇ ನಾಳೆಗಳು ನೀನೇ ಎಂದೆಂದು ನೀನೇ ಸಖಿ
ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ


ಚಿತ್ರ: ಜಸ್ಟ್ ಮಾತ್ ಮಾತಲ್ಲಿ

Friday, 5 February 2010

ಚಂದಕಿಂತ ಚಂದ..

ಚಂದಕಿಂತ ಚಂದ ನೀನೆ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ಅಂದ ಚಂದವು ನೀನೆ ಎಂದೆನು
ಚೆಂದ ಅಂದ ಅಂದ ಚೆಂದ
ಚಂದುಳ್ಳಿ ಚೆಲುವೆ ಓ ನನ್ನ ಒಲವೆ

ನಗುವ ಹೂ ನಗೆ ನಗುವಾ ಆ ಬಗೆ
ನಗುವೇ ನಾಚಿತು ನಾಚಿ ನಕ್ಕಿತು
ನಗುವಾ ಈ ಬಗೆ ಬೇಕು ಹೂವಿಗೆ
ಕಲಿಸು ಹೂವಿಗೆ ನಿನ್ನ ಹೂ ನಗೆ
ನಗುವೆ ಅಂದ ನಗುವೆ ಚಂದ
ನೀ ನಗುವೆ ಚಂದ ನಿನ್ನ ನಗುವೆ ಅಂದ

ಪ್ರೇಮದ ಅರ್ಥವ ಹುಡುಕುತ ನಿಂತೆನು
ನಿನ್ನಯ ಸ್ಪರ್ಶದಿ ಅರ್ಥವ ಕಂಡೆನು
ಅರಳು ಮಲ್ಲಿಗೆ ಅರಳಿ ನಿಂತಿತು
ನನ್ನೀ ಹೃದಯದಿ ಪ್ರೇಮವು ಅರಳಿತು
ಇಲ್ಲು ನೀನೆ ಅಲ್ಲು ನೀನೆ
ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೆ

ನನ್ನ ಉಸಿರಲಿ ನಿನ್ನ ಹೆಸರಿದೆ
ನಿನ್ನ ಹೆಸರಲೆ ನನ್ನ ಉಸಿರಿದೆ
ನಿನ್ನ ಹೆಸರಲೆ ಉಸಿರು ಹೋಗಲಿ
ಉಸಿರು ಉಸಿರಲಿ ಹೆಸರ ನಿಲ್ಲಲಿ


ಚಿತ್ರ: ಸ್ಪರ್ಶ