Wednesday, 7 May 2008

ಒಮ್ಮೆ ನಿನ್ನನ್ನು ಕಣ್ತುಂಬ...

ನನ್ನ ಹಳೆಯ ನೆನಪುಗಳ ಕೆದಕುತ ಬರೆಯುತ್ತಿದ್ದೇನೆ ಈ ಕೆಳಗಿನ ಸಿನಿಮಾ ಹಾಡಿನ ಸಾಲುಗಳನ್ನ...


ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೊ ಬಾನಲ್ಲೊ ಇನ್ನೆಲ್ಲೋ ನಾ ಕಾಣೆ

ಅರಳಿರುವ ಹೂವಿನಲ್ಲಿ ನಿನ್ನ ನೋಟವ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ
ಇಂಪಾದ ಗಾನದಲ್ಲಿ ನಿನ್ನ ಮನದ ಭಾವವ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವ
ನವಿಲಾಡೋ ನಾಟ್ಯದಲ್ಲಿ ನಿನ್ನ ಚೆಂದವ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರಗಾದೆ

ಮಿನುಗುತಿಹ ತಾರೆಯೆಲ್ಲ ನಿನ್ನ ಕಣ್ಗಳೋ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ


ಚಿತ್ರ: ಗಾಳಿ ಮಾತು
ಬರೆದವರು: ಚಿ ಉದಯಶಂಕರ್

ಮಳೆ ನಿಂತು ಹೋದ ಮೇಲೆ...


ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ.

ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ.

ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೆ ಏತಕೀ ಕಂಪನ
ಹೃದಯವು ಇಲ್ಲೆ ಕಳೆದೆ ಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ.


ಚಿತ್ರ: ಮಿಲನ
ಬರೆದವರು: ಜಯಂತ ಕಾಯ್ಕಿಣಿ

Tuesday, 6 May 2008

ಮಳೆ ಬರುವ ಹಾಗಿದೆ...


ಮಳೆ ಬರುವ ಹಾಗಿದೆ ಮನವೀಗ ಹಾಡಿದೆ |
ಹೃದಯದಲ್ಲಿ ಕೂತು ನೀನು ನನ್ನ ಕೇಳ ಬೇಕಿದೆ
ಸವಿಗನಸು ಕಾಡಿದೆ ನಸು ನಗುವು ಮೂಡಿದೆ |
ಕಾಣದಂತೆ ನಿಂತು ನೀನು ನನ್ನ ನೋಡ ಬೇಕಿದೆ.

ನಿನ್ನ ನಗುವಿನಲ್ಲೆ ನನ್ನ ನಸುಕು
ನಿನ್ನ ರೂಪ ಧರಿಸಿ ಬಂದು ನಡೆದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವೂ ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳ ಬೇಕಿದೆ. ||

ಎದೆಯ ಬಾಗಿಲಲ್ಲಿ ನಿನ್ನ ಸುಳಿವು
ಸಣ್ಣ ಆಸೆಯಲ್ಲಿ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ
ಮರೆತ ಹೋಗಿ ಚೂರು ನಟಿಸಿ ನಿನ್ನ ಕಾಡ ಬೇಕಿದೆ. ||


ಚಿತ್ರ: ಮೊಗ್ಗಿನ ಮನಸು
ಬರೆದವರು: ಜಯಂತ ಕಾಯ್ಕಿಣಿ

Monday, 5 May 2008

ನೆನಪು ನೆನಪು...


ನೆನಪು ನೆನಪು ಅವಳ ನೆನಪು ಸಾವೇ ಇರದ ಸವಿ ನೆನಪು
ನೆನಪು ನೆನಪು ಅವಳ ನೆನಪು ಕೊನೆಯೇ ಇರದ ಚಿರ ನೆನಪು
ಅವಳ ನಗು ಹುಣ್ಣಿಮೆಯ ಬೆಳಗು ನನ್ನೆದೆ ಬಾನಿಗೆ
ಅವಳ ದನಿ ರಾಗಗಳ ಗಣಿ ನನ್ನೆದೆ ಹಾಡಿಗೆ
ಧಮನಿ ಧಮನೀಲೂ ಪ್ರೀತಿ ಧ್ಯಾನ ಒಡಲ ಒಡನಾಡಿ ಅವಳೇ
ಉಸಿರು ಉಸಿರಲೂ ಪ್ರೀತಿ ಧ್ಯಾನ ಸುಖದ ಸುವ್ವಾಲಿ ಅವಳೇ.

ಅವಳುಳಿಸಿ ಹೋದ ಪ್ರೀತಿ ಎದೆಯಲ್ಲಿ ಅಮರವಾಯ್ತು
ಅದು ಸಾಕು ಸಾವಿರ ಜನ್ಮಕೂ
ಅವಳಾಡಿ ಹೋದ ಮಾತು ಕಿವಿಯಲ್ಲಿ ಕವನವಾಯ್ತು
ಅದೇ ನನ್ನ ಬಾಳಿಗೆ ಸ್ಫೂರ್ತಿಯೂ
ಹೊಸ ಉಲ್ಲಾಸ ಉತ್ಸಾಹ ಅವಳಿಂದ ನಾ ಕಂಡೆ ಈ ಜೀವ ಅವಳಲ್ಲವೇ
ಇಲ್ಲಿ ಏಕಾಂಗಿ ನಾನಲ್ಲ ಆ ನೋವು ನನಗಿಲ್ಲ ನನ್ನಲ್ಲಿ ಅವಳಿಲ್ಲವೇ.

ನನ್ನ ಬಾಳ ದಾರಿಯಲ್ಲಿ ನೆರಳಾಗಿ ಅವಳು ಇರಲು ನನ್ನೊಲವು ಬಾಡಲು ಸಾಧ್ಯವೇ
ನಾ ನೋಡೋ ಲೋಕದಲ್ಲಿ ಕಣ್ಣಾಗಿ ಅವಳು ಇರಲು ಜಗವಾಯ್ತು ಸ್ವರ್ಗವು ಮೆಲ್ಲಗೇ
ಆ ಬಿನ್ನಾಣ ಬಿಗುಮಾನ ತುಂಟಾಟ ಕುಡಿನೋಟ ಅಚ್ಚಾಯ್ತು ಎದೆ ಗೂಡಲೆ
ನನ್ನ ಸಂಗಾತಿ ತಂದಂತಹ ಸಂಪ್ರೀತಿ ಇರುವಾಗ ಬೇರೆಲ್ಲ ನನಗೇತಕೆ.


ಚಿತ್ರ: ಸವಿ ಸವಿ ನೆನಪು
ಬರೆದವರು: ಹೃದಯ ಶಿವ

Friday, 2 May 2008

ನನಗೂ ನಿನಗೂ...


ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ.

ನಲುಮೆ ಸ್ನೇಹದ ನವಿರಾದ ಗ್ರಂಥವೇ
ಪುಟವ ತೆರೆಯುವಾಗ ಹಿತವಾದ ಗಂಧವೇ
ಮೊದಲ ನುಡಿಯಲಿ ನಾನೀಗ ತನ್ಮಯ
ಇನ್ನು ಕಥೆಯಲಿ ನೀನೆನ್ನ ಕರೆದೆಯ.

ಮೊದಲ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ
ಮೃದುಲ ಭಾವಕೆ ನನ್ನೊಂದು ಕೋರಿಕೆ
ಎಲ್ಲ ತಿಳಿದರೂ ಯಾಕಿನ್ನೂ ಅಭಿನಯ
ವಿರಹ ಬಂದಿದೆ ಒಲವಿನ್ನು ನಿಶ್ಚಯ.


ಚಿತ್ರ: ಅರಮನೆ
ಬರೆದವರು: ಜಯಂತ ಕಾಯ್ಕಿಣಿ

Thursday, 1 May 2008

ನಿನ್ನ ಈ ಪ್ರೀತಿಗೆ...


ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ
ನಿನ್ನ ಸಂತೋಷಕೆ ಏಳೇಳು ಜನ್ಮವು ನಾ ಕಾಯುವೆ
ನೀನಿಲ್ಲದೆ ಉಸಿರಾಡೊಲ್ಲ ನೀನಿಲ್ಲದೆ ಕಾಲ ಓಡೊಲ್ಲ
ನನ್ನ ಈ ಕಣ್ಣಿನ ಭಾಷೆಗೆ ಹೃದಯವೇ ಸಾಕ್ಷಿಯು
ನನ್ನ ಈ ಹೃದಯದ ಹಾಡಿಗೆ ದೇವರೆ ಸಾಕ್ಷಿಯು.

ಹೃದಯ ಒಂದು ಹೃದಯ ತನ್ನ ಪ್ರೀತಿನ ಹೇಳೋ ಕ್ಷಣ
ಜಗದಲಿ ಸಾವಿರ ಋತುಗಳು ಮೂಡಿ ಬರುತಾವೆ ಒಂದೇ ದಿನ
ಪ್ರೀತಿ ಗುರುತಿಗೆ ನೂರು ತಾಜಮಹಲ ರೆಪ್ಪೆಯಲ್ಲೆ ಕಟ್ಟಬಲ್ಲೆ ನಿನ್ನಾಣೆಗೂ
ಚಂದಿರಂಗು ತೇಲಿದಂಗೆ ಬೆಳದಿಂಗಳ ಕದ್ದು ಮುಚ್ಚಿ ತರಬಲ್ಲೆ ನನ್ನಾಣೆಗೂ
ಯುಗದಾಚೆಗೂ ಯುಗಳ ಗೀತೆನ ಹಾಡುವೆ ನನ್ನ ಪ್ರೀತಿ ಜೋಪಾನ
ನಮ್ಮ ಒಂದೊಂದು ಹೆಜ್ಜೆಯಲೂ ಪ್ರೀತಿಯೇ ಕಾವಲು
ಪ್ರತಿ ಕನಸಿಗೂ ಆಕಾಶವೆ ತೆರೆದಿರೋ ಬಾಗಿಲು.

ಒಲವು ಒಂದು ಒಲವು ಶುರುವಾಗೋದೆ ಗೊತ್ತಾಗದು
ಮನಸಿನ ಮೊದಲ ಕನಸಿನ ಹೆಜ್ಜೆ ಮರೆವಲ್ಲು ಮರೆಯಾಗದು
ಸುತ್ತೋ ಭೂಮಿಯಲ್ಲಿ ನಮಗೊಂದೇ ಚರಿತೆ
ಅನ್ನಿಸುವ ಹಾಗೆ ನಾವು ಬಾಳೋಣ ಬಾ
ನೂರು ಹೊತ್ತು ಸಾವು ನಮಗೆಲ್ಲೇ ಇದ್ದರೂ
ಒಂದೇ ಜೀವವಾಗಿ ಮುಂದೆ ಸಾಗೋಣ ಬಾ
ನಿನ್ನಿಂದಲೇ ನನ್ನ ಉಸಿರಾಟ ಹೌದೆಂದಿದೆ ಭೂಮಿ ತಿರುಗಾಟ
ನಮ್ಮ ಪ್ರತಿ ನಾಳೆಗೂ ಪ್ರೀತಿಯೇ ಬೆಳಕಿನ ತೋರಣ
ನಾಳೆ ಏನಾದರೂ ಸರಿಯೇ ಪ್ರೀತಿಯೇ ಕಾರಣ.


ಚಿತ್ರ: ಹನಿ ಹನಿ
ಬರೆದವರು: ಕೆ. ಕಲ್ಯಾಣ್

ಒಂದೇ ಸಮನೆ...


ಒಂದೇ ಸಮನೆ ನಿನ್ನುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆ ಬಿಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವೇ.

ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೇ
ಪ್ರಾಣಾ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ಹೊಂಗನಸಾಛಾದದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಣಗಿ
ಅವಳನ್ನೆ ಜಪಿಸುವುದೆ ಒಲವೇ.

ನಾಲ್ಕು ಪದದಾ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೇ
ಮೂರು ಸ್ವರದಾ ಹಾಡಿನಲಿ ಹೃದಯವನು ಹರಿಬಿಡಬಹುದೇ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ.


ಚಿತ್ರ: ಗಾಳಿ ಪಟ
ಬರೆದವರು: ಯೋಗರಾಜ್ ಭಟ್