Wednesday, 25 April 2012

ಎಲ್ಲೆಲ್ಲೋ ಓಡುವ ಮನಸೆ..

ಎಲ್ಲೆಲ್ಲೋ ಓಡುವ ಮನಸೆ
ಯಾಕಿಂಥ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹೋದಲ್ಲಿ ಬಂದಲ್ಲಿ ತರವೆ
ಹರುಷವ ಮುಂದಿಡುವೆ ವ್ಯಸನವ ಬೆಂಬಿಡುವೆ
ಬಂದರೂ ಅಳುವೂ ನಗಿಸಿ ನಲಿವ ಮನವೆ |

ನಾನೂ ನನ್ನದೆನ್ನುವ ನಿನ್ನಯ ತರ್ಕವೇ ಬಾಲಿಶ
ಎಲ್ಲ ಶೂನ್ಯವೆನ್ನುವ ನಿನ್ನಯ ವರ್ಗವೇ ಅಂಕುಶ
ಕಲ್ಮಷ ನಿಷ್ಕಲ್ಮಷ ಥರ ಥರ ನಿನ್ನ ವೇಷ
ದ್ವಾದಶಿ ಏಕಾದಶಿ ಎಲ್ಲ ನಿನ್ನ ಖುಷಿ
ಇದ್ದರೂ ಜೊತೆಗೆ ದೂರ ಇರುವ ಮನವೇ |

ಬೇಕು ಬೇಡ ಎನ್ನುವ ಗೊಂದಲ ಸೃಷ್ಟಿಸೋ ಮಾಯೆ ನೀ
ತಪ್ಪು ಒಪ್ಪು ಎಲ್ಲವ ತೋರುವ ಕಾಣದ ಛಾಯೆ ನೀ
ಕಲ್ಪನೆ ಬರಿ ಕಲ್ಪನೆ ವಿಧ ವಿಧ ನಿನ್ನ ತಾಣ
ಬಣ್ಣನೆ ಬದಲಾವಣೆ ಎಲ್ಲ ನಿನ್ನ ಹೊಣೆ
ಕಂಡರೂ ಸಾವೂ ಬದುಕು ಎನ್ನುವ ಮನವೇ |


ಚಿತ್ರ: ಸಿದ್ಲಿಂಗು

Friday, 15 April 2011

ಗಗನವೆ ಬಾಗಿ..

ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರೂ ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೆ ಆಮಂತ್ರಣ |

ಜೀವನ ಈ ಕ್ಷಣ ಶುರುವಾದಂತಿದೆ
ಕನಸಿನ ಊರಿನ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ ಖುಶಿ ಈಗ ಮೇರೆ ಮೀರಿ
ಮಧುಮಾಸದಂತೆ ಕೈ ಚಾಚಿದೆ ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೆ ಆಮಂತ್ರಣ |

ಸಾವಿನ ಅಂಚಿನ ಬದುಕಂತಾದೆ ನೀ
ಸಾವಿರ ಸೂರ್ಯನ ಬೆಳಕಂತಾದೆ ನೀ
ಕೊನೆಯಾಸೆ ಒಂದೆ ಈ ಜೀವಕೆ ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲು ನೀ ಹೀಗೆಯೇ ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೆ ಆಮಂತ್ರಣ |


ಚಿತ್ರ: ಸಂಜು ಮತ್ತು ಗೀತ

Wednesday, 6 April 2011

ಸಂಜು ಮತ್ತು ಗೀತ..


ಸಂಜು ಮತ್ತು ಗೀತ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು
ನನ್ನ ಜೀವಕಿಂತ ನೀನೆ ನನ್ನ ಸ್ವಂತ
ಇರುವಾಗ ನಾನು ಚಿಂತೆ ಏನು
ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೆ ನಿನ್ನ ವಶಕಿನ್ನು
ಮಳೆಯ ಹನಿ ಉರುಳೋ ದನಿ ಥರವೇ
ನಗಬಾರದೆ ನಗಬಾರದೆ ನನ್ನೊಲವೇ |

ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ
ನಿನ್ನ ಈ ಕಣ್ಣಲಿ ಇದೆ ಕೊನೆಯ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ
ಮಳೆಯ ಹನಿ ಉರುಳೋ ದನಿ ಥರವೇ
ನಗಬಾರದೆ ನಗಬಾರದೆ ನನ್ನೊಲವೇ |

ಕಂಡಿಲ್ಲ ಯಾರೂ ಆ ದೇವರನ್ನು
ಇರಬಹುದು ಏನೋ ನಿನ್ನಂತೆ ಅವನು
ಗೆಳೆಯ ಎಂದರೆ ಅದಕೂ ಹತ್ತಿರ
ಇನಿಯ ಎಂದರೆ ಅದಕೂ ಎತ್ತರ
ಒರಗಿ ಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು
ಕರಗಿ ಹೋಗಲೇನು ನಿನ್ನ ಕರಗಳಲ್ಲಿ ನಾನು
ಯುಗದಾಚೆಗೂ ಜಗದಾಚೆಗೂ ಜೊತೆಗೆ ಸಾಗುವೆ
ಕಡಲೆಲ್ಲವ ಅಲೆ ಸುತ್ತುವ ಥರವೇ
ನಿನ್ನ ಸೇರುವೆ ನಿನ್ನ ಸೇರುವೆ ನನ್ನೊಲವೇ |


ಚಿತ್ರ: ಸಂಜು weds ಗೀತ

Tuesday, 30 November 2010

ಯಾರೇ ನೀ ದೇವತೆಯಾ..

ಯಾರೇ ನೀ ದೇವತೆಯಾ ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ ಹೇಗೆ ತಿಳಿಯಲಿ ನಾ
ಪ್ರೀತಿಸಿ ಹೊರಟವಳೆ ಯಾರನು ಕೂಗಲಿ ನಾ
ನೀ ನನ್ನ ಪ್ರಾಣ ಅಂತ ಯಾರಿಗೆ ಹೇಳಲಿ ನಾ
ಕಳೆದ್ಹೋದೆ ನಾನು ಕಳೆದ್ಹೋದೆ
ನಾ ನಿಂತಲ್ಲೆ ಪೂರ್ತಿ ಹಾಳಾದೆ |

ಹಾಡೋ ಕೋಗಿಲೆಗೊಂದು ಕೂಗೋ ಕಾಗೆಯ ಗೂಡು
ನಂಗೆ ಯಾವ ಗೂಡೂ ಇಲ್ಲ ಪ್ರೀತಿಯ ಸಾಕೋಕೆ
ಪ್ರೀತಿ ಬೀದಿಯಲ್ಲಿ ನಿಂದೆ ಪ್ರೀತಿಯ ಹಾಡು
ನಿನ್ನ ಬಿಟ್ಟು ನಂಗ್ಯಾರಿಲ್ಲ ಹೃದಯನ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ ಘಳಿಗೆ ಕೆಳಗೆ ಹೊರ ಬಂದೇನೆ
ಮಾತಿದ್ದರೂ ಹೇಳದೆ ನಿನ್ನಲಿ
ಮೂಕಾದೆ ನಾನು ಮೂಕಾದೆ ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ |

ಸಾಯೋ ರಾತ್ರೆಗೆ ಮುನ್ನ ಬೀಳೋ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ ಬಂದಾಗಲೆ ಕಣ್ಣೀರು ಸತ್ತಿತ್ತು
ಮೇಲು ಆಗಸದಲ್ಲೂ ಕಾಲುದಾರಿಯ ಮಾಡೋ
ನಿನ್ನ ಹೆಜ್ಜೆ ನಾ ಕಂಡಾಗಲೇ ಸೋಲನ್ನು ನೋಡಿದ್ದು
ಎದೆಯ ಬಡಿತ ಇದು ನಿಂದೇನೆ ಕೊನೆಯ ಬಡಿತ ನಿನ್ನ ಹೆಸರೇನೇ
ಹೇಗ್ಹೇಳಲಿ ಹುಚ್ಚು ಈ ಪ್ರೀತಿಯ
ಏನಾದೆ ನಾನು ಏನಾದೆ ಎಲ್ಲ ತಿಳಿಸೋಕೆ ಮುಂಚೆ ಹೀಗಾದೆ |


ಚಿತ್ರ: ಅಂಬಾರಿ

Monday, 25 October 2010

ಶಿವಾಂತ ಹೋಗುತಿದ್ದೆ..


ಶಿವಾಂತ ಹೋಗುತಿದ್ದೆ ರೋಡಿನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲ್ಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲ್ಲಿ
ನೀ ಕಂಡೆ ಸೈಡಿನಲ್ಲಿ
ಕಂಡು ಕಂಡು ಬಿದ್ದಹಂಗಾಯ್ತು ಹಳ್ಳದಲ್ಲಿ
ಕಂಬಳಿ ಹುಳ ಬಿಟ್ಟಹಂಗಾಯ್ತು ಹಾರ್ಟಿನಲ್ಲಿ
ಕಚಗುಳಿ ಇಟ್ಟಹಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲ್ಲಿ |

ಟೋಪು ಗೇರು ಹಾಕಂಗಿಲ್ಲ
ಸುಮ್ನೆ ಬ್ರೇಕು ಹೊಡಿಯಂಗಿಲ್ಲ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದಕ್ಕು
ನಂಗೆ ಯಾಕೆ ಹೀಂಗೆ ಅನ್ನೋ ಅನಿಸುವುದು
ಒಂದು ಮಾತು ಕೇಳಲಿಲ್ಲ
ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನ್ನು ಕೊಂಡು ಕೊಂಡುತ್ತಾಳೆ
ಮಾಡದೆ ಪಾಯವ ಕೂಡಿಬಿಟ್ಟು
ಹೂವಿನಂತ ಹುಡುಗ ನಾನು ತುಂಬ ಮೃದು
ಹೆಣ್ಮಕ್ಳೆ ಸ್ಟ್ರಾಂಗು ಗುರು |

ಉಣ್ಣಲಿಲ್ಲ ತಿನ್ನಲಿಲ್ಲ
ಮಟ ಮಟ ಮಧ್ಯಾಹ್ನವೆ
ಒಂದು ಬಿಟ್ಟು ಹಿಂದುಗಡೆ ಸೀಟಿನಲ್ಲಿ
ನಾ ಹುಡುಕಬೇಕು ನಮ್ಮದೆ ರೂಟಿನಲ್ಲಿ
ಒಂದು ಕೇಜಿ ಅಕ್ಕಿ ರೇಟು
ಮೂವತ್ತು ರೂಪಾಯಿ ಆಗಿ ಹೋಯ್ತು
ಈಸಿಯಾಗಿ ಹೇಗೆ ನಾನು ಪ್ರೀತಿಸಲಿ
ಅದರಲ್ಲೂ ಮೊದಲನೇ ಭೇಟಿಯಲಿ
ರೇಶನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ಸಂಸಾರ ಬೇಕ ಗುರು ||


ಚಿತ್ರ: ಜಾಕಿ

Wednesday, 29 September 2010

ನೀನೆಂದರೆ ನನ್ನೊಳಗೆ..


ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ
ಓ ಜೀವವೇ ಹೇಳಿ ಬಿಡು ನಿನಗೂ ಕೂಡ ಹೀಗೇನಾ ||

ತಂದೆನು ಪಿಸು ಮಾತು ಜೇಬಲ್ಲಿ ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈ ಮನ
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು
ನಿನ್ನ ನೆರಳು ಸುಳಿಯುವಲ್ಲೂ ಹೂವ ತಂದು ಸುರಿಯಲೇನು
ನಂಬಿಕುತ ಹೊಂಬ ನಾನು ನೀನು ಹೀಗೇನಾ ||

ಹೂವಿನ ಮಳೆ ನೀನು ಕನಸಲ್ಲಿ ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು
ಒಂದೆ ಕನಸು ಕಾಣುವಾಗ ನಾನು ನೀನು ಬೇರೆ ಏನು
ಶರಣು ಬಂದ ಚೋರ ನಾನು ನೀನು ಹೀಗೇನಾ ||


ಚಿತ್ರ: ಜಂಗ್ಲೀ

Monday, 2 August 2010

ನಲಿವ ಗುಲಾಬಿ ಹೂವೆ..

ನಲಿವ ಗುಲಾಬಿ ಹೂವೆ ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ ಬರಿಯೇ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ ಒಲವೋ ಛಲವೋ

ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ, ಇಂದೇಕೆ ದೂರಾದೆ?
ಹೀಗೇಕೆ ಮರೆಯಾದೆ?

ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೇ ನಿನಗಾಗಿ ನನಗಾಗಿ


ಚಿತ್ರ: ಆಟೋರಾಜ