Monday, 11 January 2010

ಕಣ್ಣ ಹನಿಯೊಂದಿಗೆ..


ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನೂ ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಗಿದೆ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ

ಮನದಲಿ ಮಿಂಚಿದೆ ಕುದಿಯುವ ಭಾವ ನದಿಯೊಂದು
ಸುಡುತಿದೆ ವೇದನೆ ಒಲವಿನ ಕಲ್ಪನೆ ತಂಪನು ಬೀರದೆ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನೂ ಮಾತಾಡದೆ

ಮಿಡಿತದ ಮುನ್ನುಡಿ ಎದೆಯಲಿ ಗೀಚಿ ನಡೆವರೆಗೆ ಉಳಿಯಲಿ ಹೇಗೆ ನಾ
ಮನದ ನಿವೇದನೆ ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ

ನಿನ್ನ ದನಿ ಕೇಳಿದೆ ನನ್ನ ನಗು ಕಾಡಿದೆ
ಸಣ್ಣ ದನಿಯೊಂದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಸೋತಿವೆ ಏನೂ ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹ್ರುದಯ ಹಾಳಾಗಿದೆ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ


ಚಿತ್ರ: ಮನಸಾರೆ

1 comment:

durans said...

hi!
I'm Korean.
I've never seen indian alpahbet before.
For the first time,I saw your writing letters.
I think they are very cute.
I love them^^