Tuesday, 12 January 2010
ಈ ಬಿಸಿಲಲಿ..
ಈ ಬಿಸಿಲಲಿ ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಏಕಾಂತದಿ ನಾ ನಿನ್ನನು ನೆನೆದೆ ಮನಸಿನಲ್ಲಿ
ಆ ಮರುಕ್ಷಣ ಕಣ್ ಬಿಟ್ಟರೆ ನೀ ನನ್ನ ಎದುರಿನಲ್ಲಿ
ಯಾಕೀಥರ ಯಾಕೀಥರ ನಾನೊಂದು ತಿಳಿಯೆನಲ್ಲೇ
ನನ್ನ ಹೃದಯದ ಕಣ ಕಣದಲೂ ನೀ ತುಂಬಿಕೊಂಡೆಯಲ್ಲೇ
ಮನಸಿನಲ್ಲಿ ಕಳವಳ ಯಾಕೋ ಒಮ್ಮೆ ನಿನ್ನ ಕಂಡರೆ ಸಾಕೋ
ತನುವು ನೀನೇ ಮನವು ನೀನೇ ನನ್ನ ಪ್ರಾಣ ಉಸಿರೂ ನೀನೇ
ಹೇಗೆ ಬಂದು ಸೇರಿದೆ ನನ್ನ ನಿನ್ನ ಬಿಟ್ಟು ಬಾಳೆನು ಚಿನ್ನ
ಬಾ ನೋಡುಬಾ ಬಾ ನೋಡುಬಾ ನನ್ನ ಮನಸಿನಾಳವ
ಒಮ್ಮೆ ಇಳಿದರೆ ನೀ ಸವಿಯುವೆ ನನ್ನ ಪ್ರೀತಿ ಸಿಹಿಯ ಚಿನ್ನ
ಈ ಬಿಸಿಲಲಿ ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಪ್ರೀತಿ ಮೊಳಕೆ ಒಡೆಯುವ ಸಮಯ ಹೃದಯ ಹೃದಯ ಸೇರುವ ಸಮಯ
ಮನಸು ಮನಸು ಹಾಡುವ ಸಮಯ ಪ್ರೇಮ ಸುಧೆಯು ಹರಡುವ ಸಮಯ
ಏಕೆ ನನ್ನ ಕಾಡುವೆ ಹೀಗೆ ನಿನ್ನ ಮನವ ತಿಳಿವುದು ಹೇಗೆ
ಬಾ ಕೇಳುಬಾ ಬಾ ಕೇಳುಬಾ ನನ್ನ ಹೃದಯ ಗೀತೆಯನ್ನ
ಒಮ್ಮೆ ಕೇಳಲು ನೀ ಅರಿಯುವೆ ನನ್ನ ಪ್ರೀತಿ ಆಳವನ್ನ
ಈ ಬಿಸಿಲಲಿ ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಚಿತ್ರ: ಬಿಸಿಲೆ
Subscribe to:
Post Comments (Atom)
No comments:
Post a Comment