Friday, 29 January 2010

ಒಬ್ಬನೇ ಒಬ್ಬನೇ..

ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ

ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ||
ಜ್ಞಾನಕೂ ಧ್ಯಾನಕೂ ಒಬ್ಬನೇ
ಭಕ್ತಿಗೂ ಮುಕ್ತಿಗೂ ಒಬ್ಬನೇ ಅವನೊಬ್ಬನೇ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ

ನೀನೊಂದು ಕಲ್ಲು ಎಂದೆ ನೀನೆಲ್ಲು ಇಲ್ಲವೆಂದೆ
ನೀನೆ ನನ್ನ ಬಳಿಗೆ ಬಂದು ನಿನ್ನಲ್ಲೇನೆ ಇರುವೆನೆಂದೆ
ನನ್ನ ಕಣ್ಣ ತೆರೆತೆರೆದು ಒಳಗಣ್ಣ ತೋರಿಸಿದೆ
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೆ
ಪೊರೆಯಲು ನಮ್ಮನು ಒಬ್ಬನೆ ಹರನೊಬ್ಬನೆ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ

ತಂದೆಯಿಲ್ಲದೋನೆ ಎಂದೇ ತಂದೆಯಾಗಿ ನೀನು ಬಂದೆ
ನಾನು ಅನ್ನೋ ಅಹಂಕಾರ ಸುಟ್ಟು ಭಸ್ಮ ಮಾಡಿದೋನೆ
ಮಂಜನ್ನು ದೀಪಮಾಡಿ ಹೊಸ ಜನ್ಮವನ್ನೆ ತಂದೆ
ಅರಿವಿಗೇನೆ ಗುರುವಾದ ಗುರುಗಳ ಗುರು ಇವನೆ
ಸತ್ಯವು ನಿತ್ಯವು ಒಬ್ಬನೆ
ಧರ್ಮವು ದೈವವು ಒಬ್ಬನೆ ಶಿವನೊಬ್ಬನೆ


ಚಿತ್ರ: ಶ್ರೀ ಮಂಜುನಾಥ

No comments: