Monday 23 June, 2008

ಮಂದಾರ ಮಂದಾರ...


ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ನೋಡೋಕೆ ಕಣ್ಸಾಲದು
ಈ ನಿನ್ನ ಸೌಂದರ್ಯವ
ಈ ನಿನ್ನ ಸೌಂದರ್ಯವ
ಯಾರೋ ಕರೆದೋರು ಈ ಚೈತ್ರವ
ಯಾರೋ ಬರೆದೋರು ಈ ಚಿತ್ರವ
ನೋಡೋಕೆ ಕಣ್ಸಾಲದು
ಈ ನಿನ್ನ ಸೌಂದರ್ಯವ
ಈ ನಿನ್ನ ಸೌಂದರ್ಯವ |ಮಂದಾರ|

ಅಂಬಾರಿಯ ಮೇಲೇರುತ ಬಂದ ಬಂದ ಸುಂದರಾಂಗ ನಿನ್ನ ವರಿಸೋಕೆ
ಬಂಗಾರದ ಕಾಲ್ಗೆಜ್ಜೆಯ ತಂದ ತಂದ ನಿನ್ನ ಪಾದ ಸಿಂಗರಿಸೋಕೆ
ಇಂದು ಬೆರಳಿಗೆ ಹಾಕುತಾನೆ ತಂದು ಚಂದ್ರನ ಉಂಗುರ
ನೀನೆ ನೀನೆ ಅವನಿಗೆ ಒಡತಿ ||ಮಂದಾರ||

ಮುಸ್ಸಂಜೆಯ ಆ ನೇಸರ ನಿನ್ನ ಅಂದ ಚಂದ ಕಂಡು ಯಾಕೋ ಮುಸುಕಾದ
ಉಕ್ಕೇರಿತು ಆ ಸಾಗರ ನಿನ್ನ ಮೈಯ ಹುಣ್ಣಿಮೆಯ ಬೆಳದಿಂಗಳಿಂದ
ಪ್ರೀತಿ ಹಕ್ಕಿಯು ಹಾರಿ ಹೋಗಿ ಬೇರೆ ಗೂಡನು ಸೇರಿತು
ಈ ಕಂಬನಿ ಹಾಡಾಯಿತು ನನ್ನ ದನಿ ಮೂಕಾಯಿತು ||ಮಂದಾರ||


ಚಿತ್ರ: ಅಂತು ಇಂತು ಪ್ರೀತಿ ಬಂತು

Friday 20 June, 2008

ಗೇಟಿನ ಮೇಲೇರಿ...



ಆ ದಿನಗಳಲ್ಲಿ, ದಿನಕ್ಕೆ ಹತ್ತಾರು ಬಾರಿಯಾದರೂ ಈ ಗೇಟನ್ನು ಏರದಿದ್ದರೆ ಅವತ್ತಿನ ಕೆಲಸಗಳು ಪೂರ್ತಿಯಾಗುತ್ತಿರಲಿಲ್ಲ! ಮನೆಯ ಎದುರುಗಡೆ ಇರುವ ಈ ದೊಡ್ಡ ಗೇಟನ್ನು ಒಮ್ಮೆಯಾದರೂ ಏರಿ ಅದರ ಚಿಲಕವನ್ನೊಮ್ಮೆ ಜೋರಾಗಿ ಎಳೆದು ಬಿಟ್ಟು ಠಂಯ್.. ಠಂಯ್.. ಎಂದು ಸದ್ದು ಮಾಡುವುದರಲ್ಲೇ ಒಂದು ಮೋಜು. ಆಮೇಲೆ ಅಮ್ಮ, ಅಪ್ಪ ಇಲ್ಲವೇ ಯಾರಾದರೂ ಬಂದು ಕೆಳಗಿಳಿಸುವವರೆಗೆ ಸಾಗುತ್ತಿತ್ತು ನನ್ನ ಸರ್ಕಸ್, ಇಲ್ಲವೇ ದಣಿವಾಗುವವರೆಗೆ.

ಅದೇ ಮೊನ್ನೆ ಶೇಣಿಗೆ ಹೋಗಿದ್ದಾಗ ಅಣ್ಣನ ಮಗರಾಯ ಶಮಂತನ ಇದೇ ಆಟವು ಸಾಗುತ್ತಿತ್ತು ಅದೇ ಗೇಟಿನ ಮೇಲೇರಿ. ಆ ನೆನಪುಗಳಲ್ಲಿ ಈ ಒಂದು ಫೋಟೋ.

Thursday 19 June, 2008

ಎಕ್ಕೆ ಹೂವು

ನೀವು ಎಕ್ಕೆ ಗಿಡದ ಹೂವನ್ನು ನೋಡಿಲ್ಲವೇ? ಹಾಗಿದ್ದರೆ ಇಲ್ಲಿ ನೋಡಿ.



ಹೋಮ ಹವನಾದಿ ಪೂಜಾ ಕಾರ್ಯದಲ್ಲಿ ಎಕ್ಕೆಯೂ ಒಂದು ಪ್ರಧಾನ ಪೂಜಾ ಸಮಿತ್ತು.

ಶಾಲೆಗೆ ಹೋಗುತ್ತಿರುವಾಗ ನಾವು ಹೂವಿನ ಮೊಗ್ಗನ್ನು ಹಿಡಿದು ಹಿಚುಕಲು ಪಟ ಪಟ ಶಬ್ದವನ್ನು ಮಾಡುತ್ತ ಹೂವು ಬಿರಿಯುತ್ತಿತ್ತು. ಆದರೆ ನಂತರ ಬರುವ ಕೈಯ ವಾಸನೆಯು ಮಾತ್ರ ಸಹಿಸಲಾಗುತ್ತಿರಲಿಲ್ಲ!

Wednesday 18 June, 2008

ಗಡಿಯಾರ ಹೂವು


ಇದೊಂದು ಕಾಡು ಸುಮವಾಗಿದ್ದು ಬಳ್ಳಿಯಲ್ಲಿ ಅರಳುತ್ತದೆ. ನಮ್ಮ ಮನೆಯ ಹಿಂದಿನ ಬರೆಯಲ್ಲಿ ಬೆಳೆಯುವ ಈ ಹೂವು ಪ್ರತಿ ವರ್ಷವೂ ಮಳೆಗಾಲದಲ್ಲಿ ಕಾಣಸಿಗುತ್ತದೆ. ಗಡಿಯಾರದಲ್ಲಿ ಸೆಕುಂಡು, ನಿಮಿಷ, ಮತ್ತು ಗಂಟೆ ಮುಳ್ಳುಗಳಿರುವಂತೆ ಈ ಹೂವಿನ ದಂಟಿನಲ್ಲೂ structures ಕಾಣಬಹುದು.

Tuesday 17 June, 2008

ಸಿಹಿ ಗಾಳಿ...

ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ
ಲೋಕವೊಂದೇ ಸಾಕು ದಿನವು ಎಳೆಯಲೇ ಬೇಕು
ಪ್ರೇಮಾಮೃತದ ಗೀತೆ ಬರೆಯೋಣ ಬಾ

ಬಾನಾಡಿಗೊಂದು ಸವಿ ಮಾತು ಕಲಿಸುವ
ಆ ವೀಣೆಗೊಂದು ಎದೆ ರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ
ನಾನಾನ.. ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೇ
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ.


ಚಿತ್ರ: ಆ ದಿನಗಳು

ಆ ದಿನಗಳು...


ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿ ಏಕೆ ಬಿಟ್ಟು ಹೋದೆ

ದಿನ ದಿನ ಮುಖವನು ನೋಡಿ ಹೊಗಳುವ ಮಾತೆಲ್ಲಿ
ಮುನಿಯುತ ಜಗಳವ ಆಡಿ ನಟಿಸಿದ ನಗುವೆಲ್ಲಿ
ನನ್ನ ಕಲ್ಪನೆ ಎಲ್ಲೋ ನಿನ್ನ ಹುಡುಕಿ ಹೋಯ್ತು
ಆ ಶಿಲ್ಪದಲಿ ಕಂಡು ಮನಸು ಶಾಂತವಾಯ್ತು
ನೀನೆಲ್ಲೋ ನಾನೆಲ್ಲೋ ಇನ್ನು ತಾಳೆ ವಿರಹ ನೋವ.


ಚಿತ್ರ: ಆ ದಿನಗಳು

Wednesday 11 June, 2008

On the way to Bheemeshwari and Chunchi Falls

May 24th, Saturday, ನಮ್ಮ gang ಹೊರಟಿದ್ದು ಭೀಮೇಶ್ವರಿಗೆ. ಅವಿನಾಶ, ಅಭಿಲಾಶ, ಪ್ರವೀಣ, ಶ್ಯಾಮ್, ಮತ್ತು ಗಣೇಶ್ ಜೊತೆಗೆ ನಮ್ಮ ನಮ್ಮ 3 Pulsar bikesನಲ್ಲಿ NH-209ನಲ್ಲಿ ಬೆಂಗಳೂರಿಂದ ಹೊರಟ ನಾವು ಕನಕಪುರ, ಸಾತನೂರು ಆಗಿ ಮುತ್ತತ್ತಿಗೆ ಬಂದೆವು. ಈ ಸ್ಥಳ ಕನಕಪುರದಿಂದ ಸುಮಾರು 25ರಿಂದ 30Km ದೂರ ಇರಬಹುದು. ಭೀಮೇಶ್ವರಿ ಇರುವುದು ಮುತ್ತತ್ತಿಯಲ್ಲೆಯೇ.



ಕಾವೇರಿ ನದಿಯು ಹರಿದು ಹೋಗುವ ಈ ಸ್ಥಳದಲ್ಲಿ ಬೆಂಗಳೂರಿನಿಂದಲೇ advance booking ಮಾಡಿ ಬಂದವರಿಗೆ Kaveri Fishing Campನಲ್ಲಿ stay ಮಾಡುವ ಸೌಲಭ್ಯವಿದೆ. ಹಾಗೆಯೇ ಒಳ್ಳೆಯ ನೀರಿರುವ ಸಮಯದಲ್ಲಿ rafting ಮಾಡಲೂ ಅನುಕೂಲಗಳಿವೆ. Govt. of Karnataka undertaking ಇಲ್ಲಿ ಪ್ರವೇಶ ಸಿಗಲು ಮುಂಗಡ ಕಾದಿರಿಸುವಿಕೆ ಅಗತ್ಯ. ಹಾಗೆಯೇ ಇಲ್ಲಿ Elephant Ride ಕೂಡ ಇದೆ.



Water level ತಕ್ಕ ಮಟ್ಟಿಗೇ ಇದ್ದ ಕಾವೇರಿ ತೀರದಲ್ಲಿ ಸ್ವಲ್ಪ ಹೊತ್ತಿನ ಮಟ್ಟಿಗೆ ದಣಿವಾರಿಸಿಕೊಂಡು ಹಾಗೆಯೇ ಕೆಲವು Photo sessions ಮಾಡ್ಕೊಂಡ್ವಿ.




ಆಗಲೇ ಮಧ್ಯಾಹ್ನವಾಗಲು ತುಂಬಾ ಹಸಿದಿದ್ದ ನಾವು 8Km ಹಿಂದೆ ಇದ್ದ ಸಾತನೂರಿಗೆ ಬಂದೆವು. ಮುತ್ತತ್ತಿಯಲ್ಲಿ ಯಾವುದೇ ಅಂಗಡಿ, ಹೋಟೆಲುಗಳ ಸೌಲಭ್ಯವಿಲ್ಲದ್ದರಿಂದ ನಮಿಗೆ ಬೇರೆ alternatives ಇರಲಿಲ್ಲ. ಸಣ್ಣ ಹೋಟೆಲಲ್ಲಿ curd rice, ಬಾಳೆಹಣ್ಣುಗಳಲ್ಲೇ ಊಟ ಮಾಡಿದ ನಮಿಗೆ ಹಸಿವು ನಿಂತರೂ ಪಯಣದ ಹಸಿವು ನಿಂತಿರಲಿಲ್ಲ. ಹತ್ತಿರದಲ್ಲೇ ಸುಮಾರು 12Km ದೂರದಲ್ಲಿ ಮೇಕೆದಾಟು ಇರುವುದನ್ನು ತಿಳಿದ ನಾವು ಅತ್ತ ಕಡೆಗೆ ಪಯಣ ಮುಂದುವರಿಸಿದೆವು. ಅಷ್ಟರಲ್ಲಾಗಲೇ ಮೋಡ ಕವಿದ ವಾತಾವರಣವಿದ್ದು ಸ್ವಲ್ಪದರಲ್ಲೇ ಮಳೆಯೂ ಶುರುವಾಯಿತು.




ಸಂಗಮ ತಲುಪಿದ ನಾವು ಮೇಕೆದಾಟು ಹೋಗಲು ಇನ್ನು ನಾಲ್ಕೇ Km ಇರುವುದು. ಆದರೆ ಇಲ್ಲಿಂದ ನಾವು bikeನಲ್ಲಿ ಹೋಗುವಂತಿಲ್ಲ. ಕಾವೇರಿ ಹೊಳೆಯನ್ನು ತೆಪ್ಪಗಳ ಸಹಾಯದಿಂದ ದಾಟಿ ಆಚೆ ಬದಿಯಲ್ಲಿರುವ ಬಾಡಿಗೆ Jeepಗಳ ಸಹಾಯ ಪಡೆಯಬೇಕು. ಆಗಲೇ ಮಳೆಯೂ ಇದ್ದಿದ್ದರಿಂದ ನಮಿಗೆ ಯಾರಿಗೂ ಅತ್ತ ಕಡೆ ನಮ್ಮ bikeನ್ನು ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ದಾರಿಯಲ್ಲೇ ನಾವು ಚುಂಚಿ ಜಲಪಾತದ ಮಾರ್ಗ ಸೂಚಿಯನ್ನು ನೋಡಿದ್ದು ಎಲ್ಲರೂ ಜಲಪಾತಕ್ಕೆ ಹೋಗಲು ನಿರ್ಧರಿಸಿದೆವು. ಸಾತನೂರಿಂದ ಮೇಕೆದಾಟು ಬರುವ ದಾರಿಯಲ್ಲಿ ಎಡಕ್ಕೆ ಸುಮಾರು 6Km ಹೋಗಲು ಈ ಜಲಪಾತ ಬರುವುದು.




ಸಾಧಾರಣದಿಂದ ಸುಮಾರು ನೀರು ಇದ್ದ ಚುಂಚಿ ನೋಡಲು ರಮ್ಯ ಮನೋಹರವಾಗಿತ್ತು. ಬಂಡೆಗಳ ಮೇಲಿಂದ ಕೆಳಗಿಳಿಯುತ್ತಾ ಸುಮಾರು ಅರ್ಧದಷ್ಟು ಜಲಪಾತದ ಕೆಳಗೆ ಇಳಿದು ನೋಡಿದೆವು. ಅಲ್ಲಿಂದ ನಂತರ ಬೆಂಗಳೂರಿಗೆ ಹಿಂತಿರುಗಲು ದಾರಿಯುದ್ದಕ್ಕೂ ಮಳೆಯ ಸಾಥ್ ನಮ್ಮನ್ನು ಬಿಡಲಿಲ್ಲ.





Monday 9 June, 2008

ಪ್ರೀತಿ ಮೂಡೋ ವೇಳೆ...

ಪ್ರೀತಿ ಮೂಡೋ ವೇಳೆ ಬದುಕೇ ಸುಂದರ ನಾಳೆ
ಆಸೆ ಅಲೆ ಮೇಲೆ ಜೀವದುಯ್ಯಾಲೆ

ಕಣ್ಣುಗಳ ಕನಸುಗಳು ಕವನಗಳಾಗೋ ವೇಳೆ
ಮನಸಿನ ಹೂ ಮುಂಗಾರ ಮೋಡ ಮಿಂಚಿನ ಮಾಲೆ
ಹೃದಯದಲಿ ಚಿಮ್ಮುತಿದೆ ನೂರು ಹೊಸ ಹೊಸ ಭಾವ
ಆಳದಲಿ ತುಡಿಯುತಿದೆ ನಿನ್ನನು ಸೇರಲು ಜೀವ
ಯಾವುದೀ ಸ್ಪಂದನ ಪ್ರೇಮಗಾನ ಜೀವಗಾನ

ನಾವಿಡುವ ಸಪ್ತಪದಿ ಕೋಟಿ ಜನುಮಕ್ಕಿರಲಿ
ನೀ ಕಟ್ಟೋ ಮಾಂಗಲ್ಯ ದಿನವೂ ಸಡಗರ ತರಲಿ
ಸೇರಕ್ಕಿ ನಾ ಕೆಡವಿ ತುಂಬುವೆ ನಿನ್ನ ಮನೆಯ
ಪ್ರೀತಿಯ ಹೂವು ನೀ ಮುಡಿಸಿ ತುಂಬು ಬಾಳೋ ಗೆಳೆಯ
ಏನಿದೀ ಬಂಧನ ಜೀವಗಾನ ಅಮರಗಾನ


ಚಿತ್ರ: ಆಕ್ಸಿಡೆಂಟ್
ಬರೆದವರು: ರಾಜೇಂದ್ರ ಕಾಮತ್

ನಿನದೇ ನಿನದೇ ನೆನಪು...

ನಿನದೇ ನಿನದೇ ನೆನಪು ನಿನಗೆ ಜೀವ ಮುಡಿಪು
ನಿನ್ನ ಸಾಧನೆಯೇ ನಿತ್ಯೋತ್ಸವವು

ನಿನ್ನ ಕನಸ ಜೋಗುಳದೊಡನೆ ರಾತ್ರಿ ನಿದ್ದಿಸುತಿರುವೆ
ನಿನ್ನ ನೆನಪ ನೇಸರ ನೋಡುತ ದಿನವೂ ಏಳುತ್ತಿರುವೆ
ಸೌಂದರ್ಯ ಸೌಜನ್ಯ ಸೇರಿಹ ಸವಿ ಸವಿ ನಶೆ ನೀನು
ತಾರೆಗಳಂತೆ ಹೂವುಗಳಂತೆ ಪ್ರಕೃತಿ ನೀಡಿದ ವರ ನೀನು
ಯಾವುದೀ ಸ್ಪಂದನ ಪ್ರೇಮಗಾನ ಜೀವಗಾನ

ಕಣ್ಣ ಹರಿಸಿದ ಕಡೆಯೆಲ್ಲ ನಿನ್ನ ನಗುವಿನ ಜಾತ್ರೆ
ಜನ್ಮ ಜನ್ಮಕೂ ಜೊತೆಗಿರು ನೀ ಮಾಡುವ ಪ್ರೀತಿಯ ಯಾತ್ರೆ
ಸಾವಿರ ಜನರ ನಡುವಲ್ಲೂ ನೀನಿರದೇ ನಾ ಒಂಟಿ
ದೂರದಲ್ಲಿದ್ದರೂ ನೀನು ಹತ್ತಿರ ಹತ್ತಿರ ತುಂಟಿ
ಯಾವುದೀ ಬಂಧನ ಜೀವಗಾನ ಅಮರಗಾನ


ಚಿತ್ರ: ಆಕ್ಸಿಡೆಂಟ್
ಬರೆದವರು: ರಾಜೇಂದ್ರ ಕಾಮತ್

Wednesday 4 June, 2008

ನಗೂ ಎಂದಿದೆ...

ನಗೂ ಎಂದಿದೆ ಮಂಜಿನ ಬಿಂದೂ
ನಲೀ ಎಂದಿದೆ ಗಾಲಿ ಇಂದೂ

ಚಿಲಿಪಿಲಿಯೆಂದೂ ಹಕ್ಕಿಯು ಹೇಳಿದೆ ಈಗಾ ಬಾ ಬಾ
ಜೊತೆಯಲಿ ಕೂಡಿ ನನ್ನಂತೆ ಹಾರು ನೀ ಬೇಗ ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೆ ಈಗಲೇ ನಾ ನನ್ನ ಸ್ನೇಹಿತನಾ...

ನಗೂ ಎಂದಿದೆ ಮಂಜಿನ ಬಿಂದೂ
ನಲೀ ಎಂದಿದೆ ಗಾಲಿ ಇಂದೂ..

ತಾ ನಾ ತನನನನ ತನನಾನ
ತನನನ ತನನನ ನಾನ
ತಾ ನಾ

ಹಾಡುವ ಬಾ ಬಾ ನದಿಯಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದ ಕವನವಿದೂ
ಮಮತೆಯ ಸೊಬಗಿನ ಪಲ್ಲವಿಯೊ
ಸುಂದರ ಸ್ನೇಹವಿದೂ
ಇಂತಃ ಅನುಬಂಧಾ ಎಂತಃ ಆನಂದಾ

ಇದೇ ನಗುವ ಮನದಾ ಸ್ಪಂದಾ
ಸವೀ ಮಧುರಾ ಮಮತೆ ಬಂಧಾ


ಚಿತ್ರ: ಪಲ್ಲವಿ ಅನುಪಲ್ಲವಿ
ಬರೆದವರು: ಆರ್. ಎನ್. ಜಯಗೋಪಾಲ್

ಕುಂಟಂಗೇರ್

ಊರಿನವರ ಬಾಯಿಯಲ್ಲಿ ಕುಂಟಂಗೇರ್ (ಕುಂಟ ನೇರಳೆ ಹಣ್ಣು) ಎಂದೇ ಪ್ರಸಿದ್ಧಿ ಪಡೆದಿರುವ ಈ ಹಣ್ಣು ಕೂಡ ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಗುಡ್ಡೆಗಳಲ್ಲಿ ಕಾಡು ಸಸ್ಯದಲ್ಲಿ ಬೆಳೆಯುವ ಇದು ಮಲೆನಾಡಿನ ಅಡಿಕೆ ಕೃಷಿಕರಿಗೆ ತೋಟಕ್ಕೆ ಒಳ್ಳೆಯ ಸೊಪ್ಪು ಗೊಬ್ಬರವೂ ಹೌದು.



ತಿನ್ನಲು ಬಾಯಿಯಲ್ಲಿ ಪೆನ್ನಿನ ಶಾಯಿಯಂತೆ ನೇರಳೆ ಬಣ್ಣ ಹರಡುವುದರಿಂದಲೇ ಇರಬೇಕು ಇದರ ಈ ಹೆಸರು. ರುಚಿಯಲ್ಲಿ ಸ್ವಲ್ಪ ಸಿಹಿಯೂ ಸ್ವಲ್ಪ ಹುಳಿಯೂ ಇರುವ ಈ ಹಣ್ಣು ಜ್ವರ, ಶೀತದಂತಹ ಅಸೌಖ್ಯಕ್ಕೆ ಬಹು ಬೇಗನೆ ಕಾರಣವಾಗುತ್ತದೆ.

Tuesday 3 June, 2008

ದೇವರ ಹುಳ

ಮೊನ್ನೆ ಶನಿವಾರ "ಶೇಣಿ"ಗೆ ಹೋಗುವಾಗ ಈ ಅಪರೂಪದ ನೆಂಟನ ಭೇಟಿಯಾಯ್ತು ನೋಡಿ. ಕೂಡಲೇ ಚೀಲದೊಳಗೆ ಇಳಿದ ನನ್ನ ಕ್ಯೆ ಕೆಲವು ಫೊಟೋಗಳನ್ನು ಕ್ಲಿಕ್ಕಿಸಿತು. ತುಂಬಾ ಅವಸರದಲ್ಲಿ ಓಡಾಡುತ್ತಿದ್ದ ಇವನನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಸೆಕೆಂಡುಗಳಿಂದ ಕೆಲವು ನಿಮಿಷಗಳೇ ಹಿಡಿಯಿತು.


ಇದೊಂದು ತುಂಬಾ ಸೌಮ್ಯ ಸ್ವಭಾವದ ಕೀಟವಾಗಿದ್ದು ಮಲೆನಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಮಳೆಗಾಲದಲ್ಲಿ ಮಳೆ ಬಂದು ನಿಂತ ಕೂಡಲೇ ಇವು ಹೊರಗಡೆ ಕಾಣಸಿಗುತ್ತವೆ. ಗಾತ್ರದಲ್ಲಿ ಸಾಧಾರಣ ಜೀರುಂಡೆಗಳಿಗಿಂತ ಸಣ್ಣಗೂ ಇರುವೆಗಿಂತ ದೊಡ್ಡಗೂ ಇರುತ್ತವೆ.
ನಾವು ಶಾಲೆಗಳಿಗೆ ಹೋಗುತ್ತಿರುವ ಸಮಯದಲ್ಲಿ ಈ ಕೀಟಗಳು ಸಿಕ್ಕಿದರೆ ಸಣ್ಣ ಕೋಲಿನಿಂದ ಚುಚ್ಚಿ ಇಲ್ಲವೇ ನೂಕಿಕೊಂಡು ಇದಕ್ಕೆ ಉಪಟಳಗಳನ್ನು ಕೊಡುತ್ತಿದ್ದೆವು. ಅದಕ್ಕಾಗಿ ಅಮ್ಮ ನೋಡಿದರೆ ನನಗೆ ಯಾವಾಗಲೂ ಹೇಳುವರು, "ಅದು ದೇವರ ಹುಳ, ಅದಿಕೆ ತೊಂದರೆ ಕೊಡಬೇಡ" ಎಂದು. ಹಾಗಾದರೂ ಈ ಮಕ್ಕಳು ಅದನ್ನು ಸುಮ್ಮನೆ ಬಿಡಲಿ ಎಂದು.