Monday, 9 June, 2008

ನಿನದೇ ನಿನದೇ ನೆನಪು...

ನಿನದೇ ನಿನದೇ ನೆನಪು ನಿನಗೆ ಜೀವ ಮುಡಿಪು
ನಿನ್ನ ಸಾಧನೆಯೇ ನಿತ್ಯೋತ್ಸವವು

ನಿನ್ನ ಕನಸ ಜೋಗುಳದೊಡನೆ ರಾತ್ರಿ ನಿದ್ದಿಸುತಿರುವೆ
ನಿನ್ನ ನೆನಪ ನೇಸರ ನೋಡುತ ದಿನವೂ ಏಳುತ್ತಿರುವೆ
ಸೌಂದರ್ಯ ಸೌಜನ್ಯ ಸೇರಿಹ ಸವಿ ಸವಿ ನಶೆ ನೀನು
ತಾರೆಗಳಂತೆ ಹೂವುಗಳಂತೆ ಪ್ರಕೃತಿ ನೀಡಿದ ವರ ನೀನು
ಯಾವುದೀ ಸ್ಪಂದನ ಪ್ರೇಮಗಾನ ಜೀವಗಾನ

ಕಣ್ಣ ಹರಿಸಿದ ಕಡೆಯೆಲ್ಲ ನಿನ್ನ ನಗುವಿನ ಜಾತ್ರೆ
ಜನ್ಮ ಜನ್ಮಕೂ ಜೊತೆಗಿರು ನೀ ಮಾಡುವ ಪ್ರೀತಿಯ ಯಾತ್ರೆ
ಸಾವಿರ ಜನರ ನಡುವಲ್ಲೂ ನೀನಿರದೇ ನಾ ಒಂಟಿ
ದೂರದಲ್ಲಿದ್ದರೂ ನೀನು ಹತ್ತಿರ ಹತ್ತಿರ ತುಂಟಿ
ಯಾವುದೀ ಬಂಧನ ಜೀವಗಾನ ಅಮರಗಾನ


ಚಿತ್ರ: ಆಕ್ಸಿಡೆಂಟ್
ಬರೆದವರು: ರಾಜೇಂದ್ರ ಕಾಮತ್

No comments: