ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ||
ಜ್ಞಾನಕೂ ಧ್ಯಾನಕೂ ಒಬ್ಬನೇ
ಭಕ್ತಿಗೂ ಮುಕ್ತಿಗೂ ಒಬ್ಬನೇ ಅವನೊಬ್ಬನೇ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ನೀನೊಂದು ಕಲ್ಲು ಎಂದೆ ನೀನೆಲ್ಲು ಇಲ್ಲವೆಂದೆ
ನೀನೆ ನನ್ನ ಬಳಿಗೆ ಬಂದು ನಿನ್ನಲ್ಲೇನೆ ಇರುವೆನೆಂದೆ
ನನ್ನ ಕಣ್ಣ ತೆರೆತೆರೆದು ಒಳಗಣ್ಣ ತೋರಿಸಿದೆ
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೆ
ಪೊರೆಯಲು ನಮ್ಮನು ಒಬ್ಬನೆ ಹರನೊಬ್ಬನೆ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ತಂದೆಯಿಲ್ಲದೋನೆ ಎಂದೇ ತಂದೆಯಾಗಿ ನೀನು ಬಂದೆ
ನಾನು ಅನ್ನೋ ಅಹಂಕಾರ ಸುಟ್ಟು ಭಸ್ಮ ಮಾಡಿದೋನೆ
ಮಂಜನ್ನು ದೀಪಮಾಡಿ ಹೊಸ ಜನ್ಮವನ್ನೆ ತಂದೆ
ಅರಿವಿಗೇನೆ ಗುರುವಾದ ಗುರುಗಳ ಗುರು ಇವನೆ
ಸತ್ಯವು ನಿತ್ಯವು ಒಬ್ಬನೆ
ಧರ್ಮವು ದೈವವು ಒಬ್ಬನೆ ಶಿವನೊಬ್ಬನೆ
ಚಿತ್ರ: ಶ್ರೀ ಮಂಜುನಾಥ
Friday, 29 January 2010
Wednesday, 20 January 2010
ಹೊಸ ಗಾನ ಬಜಾನಾ..
I am crazy about you..
ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ, ಸ್ಪೀಡಾಗಿದೆ ಜಮಾನಾ
ನನ್ನ ಜೊತೆ ಜೋಪಾನ, ಹೊಸ ಗಾನ ಬಜಾನಾ
ನಿಧಾನವೇ ಪ್ರಧಾನ, ಅಷ್ಟೇ ಸೇಪು ಪ್ರಯಾಣ
ಹೇಳಿಕೊಂಡೇ ಹೋಗೋಣ, ಹಳೇ ಪ್ರೇಮ ಪುರಾಣ
ಯಾಕೋ.. ಅಹ್ಹಾ.. ನಂಗೇ.. ಆಹಾ.. ತುಂಬಾ.. ಓಹೋ.. ಬೋರು.. ಹಂಗಾ..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ
ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ
ಗಾನ.. ಸಿಂಗು ಗಾನ.. ಗಾನ.. ಸಿಂಗು ಗಾನ
Johny johny yes pappa
Eating sugar no no pappa
ಕನ್ನಡದಲ್ಲಿ ಹೇಳ್ಬೇಕಪ್ಪ
ಅವಲಕ್ಕಿ ಪವಲಕ್ಕಿ ಡಾಂ ಡೂಂ ಡುಸುಕು ಪುಸುಕು
ಪ್ರೀತಿ ಗೀತಿ ಇರಲಿ ಸ್ವಲ್ಪ
I love you ಹೇಳೋದಕ್ಕೆ, ತುಂಬಾನೇ ಸುಸ್ತಾಗುತ್ತೆ
ನೀನಂತೂ ಸಿಕ್ಕಾಪಟ್ಟೆ, ಸೋಮಾರಿ ಆಗಿಬಿಟ್ಟೆ
ದೂರ ಕುಳಿತು ನಡುವೆ ಗೇಪ್ ಬಿಡೋಣ
ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ
ಏನೇ,
I am crazy about you
I am crazy about you
ಮುತ್ತು ಕೊಡೋ ಬೆಟ್ಟಿಂಗ್ ಕಟ್ಟಿ, ಹೆಡ್ ಪುಶ್ ಆಡೋಣ ಬಾ
ತುಂಬಾ ಕಾಸ್ಟ್ಲಿ ನನ್ನ ಮುತ್ತು
ಯಾವುದೋ ಒಂದು ಬೆಟ್ಟ ಹತ್ತಿ, ಅಪ್ಪಿಕೊಂಡು ಕೂರೋಣ ಬಾ
ನಂಗೆ ಬೇರೆ ಕೆಲಸ ಇತ್ತು
ಈ ಹಾಡು ಹೇಳೋದಕ್ಕಿಂತ, ಬೇರೊಂದು ಕೆಲಸ ಬೇಕ
ಸಾಕಾಯ್ತು ತೈಯ ತಕ, ಮಾತಾಡು ಕಷ್ಟ ಸುಖ
Future ಪಾಪುಗೊಂದು ಹೆಸರು ಇಡೋಣ
ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ, ಸ್ಪೀಡಾಗಿದೆ ಜಮಾನಾ
ನನ್ನ ಜೊತೆ ಜೋಪಾನ, ಹೊಸ ಗಾನ ಬಜಾನಾ
ಯಾಕೋ.. ಅಹ್ಹಾ.. ನಂಗೇ.. ಆಹಾ.. ತುಂಬಾ.. ಓಹೋ.. ಬೋರು.. ಹಂಗಾ..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ
ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ
ಚಿತ್ರ: ರಾಮ್
Tuesday, 12 January 2010
ಈ ಬಿಸಿಲಲಿ..
ಈ ಬಿಸಿಲಲಿ ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಏಕಾಂತದಿ ನಾ ನಿನ್ನನು ನೆನೆದೆ ಮನಸಿನಲ್ಲಿ
ಆ ಮರುಕ್ಷಣ ಕಣ್ ಬಿಟ್ಟರೆ ನೀ ನನ್ನ ಎದುರಿನಲ್ಲಿ
ಯಾಕೀಥರ ಯಾಕೀಥರ ನಾನೊಂದು ತಿಳಿಯೆನಲ್ಲೇ
ನನ್ನ ಹೃದಯದ ಕಣ ಕಣದಲೂ ನೀ ತುಂಬಿಕೊಂಡೆಯಲ್ಲೇ
ಮನಸಿನಲ್ಲಿ ಕಳವಳ ಯಾಕೋ ಒಮ್ಮೆ ನಿನ್ನ ಕಂಡರೆ ಸಾಕೋ
ತನುವು ನೀನೇ ಮನವು ನೀನೇ ನನ್ನ ಪ್ರಾಣ ಉಸಿರೂ ನೀನೇ
ಹೇಗೆ ಬಂದು ಸೇರಿದೆ ನನ್ನ ನಿನ್ನ ಬಿಟ್ಟು ಬಾಳೆನು ಚಿನ್ನ
ಬಾ ನೋಡುಬಾ ಬಾ ನೋಡುಬಾ ನನ್ನ ಮನಸಿನಾಳವ
ಒಮ್ಮೆ ಇಳಿದರೆ ನೀ ಸವಿಯುವೆ ನನ್ನ ಪ್ರೀತಿ ಸಿಹಿಯ ಚಿನ್ನ
ಈ ಬಿಸಿಲಲಿ ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಪ್ರೀತಿ ಮೊಳಕೆ ಒಡೆಯುವ ಸಮಯ ಹೃದಯ ಹೃದಯ ಸೇರುವ ಸಮಯ
ಮನಸು ಮನಸು ಹಾಡುವ ಸಮಯ ಪ್ರೇಮ ಸುಧೆಯು ಹರಡುವ ಸಮಯ
ಏಕೆ ನನ್ನ ಕಾಡುವೆ ಹೀಗೆ ನಿನ್ನ ಮನವ ತಿಳಿವುದು ಹೇಗೆ
ಬಾ ಕೇಳುಬಾ ಬಾ ಕೇಳುಬಾ ನನ್ನ ಹೃದಯ ಗೀತೆಯನ್ನ
ಒಮ್ಮೆ ಕೇಳಲು ನೀ ಅರಿಯುವೆ ನನ್ನ ಪ್ರೀತಿ ಆಳವನ್ನ
ಈ ಬಿಸಿಲಲಿ ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಚಿತ್ರ: ಬಿಸಿಲೆ
Monday, 11 January 2010
ಕಣ್ಣ ಹನಿಯೊಂದಿಗೆ..
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನೂ ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಗಿದೆ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಮನದಲಿ ಮಿಂಚಿದೆ ಕುದಿಯುವ ಭಾವ ನದಿಯೊಂದು
ಸುಡುತಿದೆ ವೇದನೆ ಒಲವಿನ ಕಲ್ಪನೆ ತಂಪನು ಬೀರದೆ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನೂ ಮಾತಾಡದೆ
ಮಿಡಿತದ ಮುನ್ನುಡಿ ಎದೆಯಲಿ ಗೀಚಿ ನಡೆವರೆಗೆ ಉಳಿಯಲಿ ಹೇಗೆ ನಾ
ಮನದ ನಿವೇದನೆ ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ ನನ್ನ ನಗು ಕಾಡಿದೆ
ಸಣ್ಣ ದನಿಯೊಂದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಸೋತಿವೆ ಏನೂ ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹ್ರುದಯ ಹಾಳಾಗಿದೆ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಚಿತ್ರ: ಮನಸಾರೆ
Subscribe to:
Posts (Atom)