Tuesday, 6 October 2009

ನಡೆದಾಡುವ ಕಾಮನಬಿಲ್ಲು...


ನಡೆದಾಡುವ ಕಾಮನಬಿಲ್ಲು
ಉಸಿರಾಡುವ ಗೊಂಬೆಯು ಇವಳು
ಸಿಗಲಾರಳು ಹೋಲಿಕೆಗೆ ಇವಳು
ಏನೆಂದರೂ ಸುಂದರ ಸುಳ್ಳು |||ನಡೆದಾಡುವ|||

ನಡೆದಾಡುವ ಕಾಮನಬಿಲ್ಲು

ನಕ್ಕರೆ ಸೇರಿದ ಹಾಗೆ ಸಾವಿರ ಶುಭ ಶಕುನ
ಮಾತಿನ ಲಹರಿಯೆ ಒಂದು ಸುಂದರ ಸವಿಗಾನ ||ನಕ್ಕರೆ||
ಬೆಳ್ಳಿಮೋಡ ಇವಳ ಮನಸು ಮನಸು
ಮಿಂಚು ಬಳ್ಳಿ ಅಂದದ ಮುನಿಸು
ಸ್ವರ್ಗದಲ್ಲೂ ಇರದ ಸೊಗಸು ಸೊಗಸು
ಮಾರುತ್ತಾಳೆ ಮಾಯದ ಕನಸು
ಪದೆ ಪದೆ ಪದೆ ಪದೆ ಆರೆರೆ
ಮರುಳಾದೆ ನೋಡಿ ಇವಳೆಂಥ ಮೋಡಿ ||ನಡೆದಾಡುವ||

ದೀಪದ ಕಣ್ಣುಗಳಲ್ಲಿ ಹುಣ್ಣಿಮೆ ಪ್ರತಿಕ್ಷಣವು
ಕೆನ್ನೆಯ ದಿಣ್ಣೆಗಳಲ್ಲಿ ಮುಗಿಯದ ಮುಂಜಾವು ||ದೀಪದ||
ಹೆಜ್ಜೆ ಹಾಕೊ ಇವಳ ನಯಕೆ ನಯಕೆ
ಭೂಮಿಗೂನು ಪುಳಕದ ಜಳಕ
ಬಾನಿನಿಂದ ಕೆಳಗೆ ಇಣುಕಿ ಇಣುಕಿ
ದೇವರಿಗೂ ನೋಡುವ ತವಕ
ಸವಿ ಸವಿ ಸವಿ ಸವಿ ಅಹ್ಹಹಾ
ಈ ಹುಡುಗಿ ಇದೇನೊ ಶರಣಾದೆ ನಾನು |||ನಡೆದಾಡುವ|||


ಚಿತ್ರ: ಪರಿಚಯ