ನೀ ನನ್ನ ಉಸಿರಾಗಬೇಡ
ಉಸಿರು ನಿಲ್ಲುವುದು ಒಂದು ದಿನ
ನೀ ನನ್ನ ಕಣ್ಣಾಗಬೇಡ
ಕಣ್ಣು ಮುಚ್ಚುವುದು ಒಂದು ದಿನ
ಪ್ರೀತಿಯೇ ಅಮರ ಬೇರೆಲ್ಲ ನಶ್ವರ
ಓ ನನ್ನ ಪ್ರೀತಿಯೇ.. ಓ ನನ್ನ ಪ್ರೀತಿಯೇ ||ನೀ ನನ್ನ||
ಚಂದಿರನಾಗದಿರು ಅದು ಕರಗುವುದು
ಸಾಗರವಾಗದಿರು ಅದು ಕೆರಳುವುದು
ಇಬ್ಬನಿಯಾಗದಿರು ಅದು ಆರವುದು
ಮಳೆಹನಿಯಾಗದಿರು ಅದು ಚೆಲ್ಲುವುದು
ಅಂದೂ ಇಂದೂ ಮುಂದೂ ನನ್ನವಳಾಗು ಎಂದೂ
ಓ ನನ್ನ ಪ್ರೀತಿಯೇ ||ನೀ ನನ್ನ||
ನೀ ಹೂವಾಗದಿರು ಅದು ಬಾಡುವುದು
ನೀ ಹಾಡಾಗದಿರು ಅದು ಮುಗಿಯುವುದು
ನೀ ಮುತ್ತಾಗದಿರು ಅದು ಸವೆಯುವುದು
ನೀ ಮತ್ತಾಗದಿರು ಅದು ಇಳಿಯುವುದು
ಅಂದೂ ಇಂದೂ ಮುಂದೂ ನನ್ನವಳಾಗು ಎಂದೂ
ಓ ನನ್ನ ಪ್ರೀತಿಯೇ ||ನೀ ನನ್ನ||
ಚಿತ್ರ: ಬೆಳದಿಂಗಳಾಗಿ ಬಾ.
No comments:
Post a Comment