Tuesday, 3 June 2008

ದೇವರ ಹುಳ

ಮೊನ್ನೆ ಶನಿವಾರ "ಶೇಣಿ"ಗೆ ಹೋಗುವಾಗ ಈ ಅಪರೂಪದ ನೆಂಟನ ಭೇಟಿಯಾಯ್ತು ನೋಡಿ. ಕೂಡಲೇ ಚೀಲದೊಳಗೆ ಇಳಿದ ನನ್ನ ಕ್ಯೆ ಕೆಲವು ಫೊಟೋಗಳನ್ನು ಕ್ಲಿಕ್ಕಿಸಿತು. ತುಂಬಾ ಅವಸರದಲ್ಲಿ ಓಡಾಡುತ್ತಿದ್ದ ಇವನನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಸೆಕೆಂಡುಗಳಿಂದ ಕೆಲವು ನಿಮಿಷಗಳೇ ಹಿಡಿಯಿತು.


ಇದೊಂದು ತುಂಬಾ ಸೌಮ್ಯ ಸ್ವಭಾವದ ಕೀಟವಾಗಿದ್ದು ಮಲೆನಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಮಳೆಗಾಲದಲ್ಲಿ ಮಳೆ ಬಂದು ನಿಂತ ಕೂಡಲೇ ಇವು ಹೊರಗಡೆ ಕಾಣಸಿಗುತ್ತವೆ. ಗಾತ್ರದಲ್ಲಿ ಸಾಧಾರಣ ಜೀರುಂಡೆಗಳಿಗಿಂತ ಸಣ್ಣಗೂ ಇರುವೆಗಿಂತ ದೊಡ್ಡಗೂ ಇರುತ್ತವೆ.
ನಾವು ಶಾಲೆಗಳಿಗೆ ಹೋಗುತ್ತಿರುವ ಸಮಯದಲ್ಲಿ ಈ ಕೀಟಗಳು ಸಿಕ್ಕಿದರೆ ಸಣ್ಣ ಕೋಲಿನಿಂದ ಚುಚ್ಚಿ ಇಲ್ಲವೇ ನೂಕಿಕೊಂಡು ಇದಕ್ಕೆ ಉಪಟಳಗಳನ್ನು ಕೊಡುತ್ತಿದ್ದೆವು. ಅದಕ್ಕಾಗಿ ಅಮ್ಮ ನೋಡಿದರೆ ನನಗೆ ಯಾವಾಗಲೂ ಹೇಳುವರು, "ಅದು ದೇವರ ಹುಳ, ಅದಿಕೆ ತೊಂದರೆ ಕೊಡಬೇಡ" ಎಂದು. ಹಾಗಾದರೂ ಈ ಮಕ್ಕಳು ಅದನ್ನು ಸುಮ್ಮನೆ ಬಿಡಲಿ ಎಂದು.

1 comment:

ಬಾನಾಡಿ said...

ಮೊನ್ನೆ ಮಳೆಗಾಲದಲ್ಲಿ ಊರಲ್ಲಿ ಸಿಕ್ಕವು. ನಾನೂ ಫೊಟೊ ಹೊಡೆದೆ. ಇಷ್ಟು ಚೆನ್ನಾಗಿ ಬಂದಿಲ್ಲ. ಅದು ಕೆಂಪಾಗಿರುವುದಕ್ಕೇನೋ ನಮಗೆ ನಮ್ಮ ದೊಡ್ದವರು ಕೂಡ ಹೇಳಿದ್ದು ದೇವರ ಹುಳವೆಂದು. ವೀಳ್ಯ ತಿಂದು ದೇವರು ಉಗುಳಿದ್ದು!!ಕಲ್ಪನೆ ವಿಚಿತ್ರ!