Monday, 12 October 2009
ಎಲ್ಲೋ ಮಳೆಯಾಗಿದೆಯೆ೦ದು...
ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯೆ೦ದು ಕನಸೊ೦ದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ || ಎಲ್ಲೋ ||
ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕ೦ಡರೆ ದೇವರಿಗೂ ಕೋಪವು ಬರಬಹುದೇ || ಎಲ್ಲೋ ||
ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ || ಎಲ್ಲೋ ||
ಚಿತ್ರ: ಮನಸಾರೆ
Labels:
ello maleyaagideyendu,
manasaare
Subscribe to:
Post Comments (Atom)
1 comment:
Did you type all this by yourself?
Good work!
I was searching for this film name.
Post a Comment