Monday, 11 August 2008
ಮಾತಿನಲ್ಲಿ ಹೇಳಲಾರೆನು...
ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
ಅಂತಃ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಕಣ್ಣಲ್ಲಿದೆ ಆ ಕಣ್ಣಲ್ಲಿದೆ
ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ ಆಹಾ ಇನ್ನೆಲ್ಲಿದೆ
ಹೂ ಮನಸಿನ ಆ ಮಧುಗೊಂಜನ
ಬೇರೆ ಏನೂ ಕಾಣಲಾರೆ ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
ನಗೆಯಲ್ಲಿದೆ ಆ ಬಗೆಯಲ್ಲಿದೆ
ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ
ತಲೆಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚಂದವಾಗಿ ಅಳಿಸದಂತಹ ಗಂಧವಾಗಿ
ಮೊದಲ ಬಾರಿ ಕಂಡ ಕ್ಷಣವೇ ಬಂಧಿಯಾದೆನು
ಹೋದೆ ನಾನು ಕಳೆದು ದಯಮಾಡಿ ಪತ್ತೆ ಮಾಡಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
ಅಂತಃ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಚಿತ್ರ: ಬೊಂಬಾಟ್
Labels:
bombaat,
maatinalli
Subscribe to:
Post Comments (Atom)
No comments:
Post a Comment