Tuesday, 5 August 2008

ಏನೋ ಇದೆ...


ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ
ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲ ಆಗಿದೆ
ಕರೆಯುವ ಕೊರಳೆ ಮೌನ ತಾಳಿದೆ
ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಓ ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೆ ಕೊರೆದಂತೆ
ನನ್ನ ಶೋಕ ಗೀತೆ ನಾನೇ ಬರೆದಂತೆ
ಬರಿ ತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ನೀ ಒಲವೇ
ಬೆಳದಿಂಗಳೆ ಮರೆಯಾಗಿದೆ ಮರೆಯಾಗಿದೆ
ಆಕಾಶವೆ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಕಾಡುವಂತ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣ ಒಂದು ಎದೆಯಲ್ಲಿ
ನೀನೆ ಬೇಕು ಎಂಬ ನನ್ನ ಛಲದಲ್ಲಿ
ಲೂಟಿ ಆಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ
ಅಥವಾ ಇದು ಸಾವಿನ ತಿನಿಸೇ
ನಿಜ ಬಣ್ಣವೆ ಬಯಲಾಗಿದೆ ಬಯಲಾಗಿದೆ
ಆಕಾಶವೆ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ
ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲ ಆಗಿದೆ
ಕರೆಯುವ ಕೊರಳೆ ಮೌನ ತಾಳಿದೆ
ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ


ಚಿತ್ರ: ಸೈಕೋ
ಬರೆದವರು: ಜಯಂತ್ ಕಾಯ್ಕಿಣಿ
ಹಾಡಿದವರು: ರಾಘು ದೀಕ್ಷಿತ್

No comments: