Tuesday, 20 October 2009
ಹೂವಿನ ಬಾಣದಂತೆ..
ಆಆಆ.. ಆಆಆ.. ಆಆಆ.. ಆಆಆಆ
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡಿನ ಸಾಲಿನಲ್ಲಿ
ಮೂಡುವ ಪ್ರಾಣದಂತೆ ಚೇತನವಾದೆ ನೀನು
ಆಆಆ.. ಆಆಆ.. ಆಆಆ.. ಆಆಆಆ
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡಿನ ಸಾಲಿನಲ್ಲಿ
ಮೂಡುವ ಪ್ರಾಣದಂತೆ ಚೇತನವಾದಂತೆ ನೀನೆ ನೀನು
ನೂತನಳಾದಂತೆ ನಾನೆ ನಾನು ನೀ ಬಂದ ಮೇಲೆ ಬಾಕಿ ಮಾತೇನು
ಆಆಆ.. ಆಆಆ.. ಆಆಆ.. ಆಆಆಆ
ಸಾಲದು ಇಡೀ ದಿನ.. ಜರೂರಿ ಮಾತಿಗೆ..
ಕಾದಿದೆ ಸದಾ ಮನ ಅಪಾರ ಪ್ರೀತಿಗೆ.. ಓ..
ಮಾಡ ಬೇಕಿಲ್ಲ ಹಾಡಿಗೆಳೆ ಸಾಕು ನೀನೀಗ ಬಂದರೇನೆ
ಅಗೋಚರ.. ಆಗೋಚರ ನಾ ಕೇಳ ಬಲ್ಲೆ ನಿನ್ನ ಇಂಚರ
ಆಆಆ.. ಆಆಆ.. ಆಆಆ.. ಆಆಆಆ
ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ.. ಓ..
ಸ್ವಪ್ನವಾ ತಂದ ನೌಕೆ ನೀನು
ಸುಪ್ತವಾದಂಥ ತೀರ ನಾನು
ಅನಾಮಿಕಾ.. ಅನಾಮಿಕಾ ಈ ಯಾನಕ್ಕೀಗ ನೀನೆ ನಾವಿಕ
ಚಿತ್ರ: ಬಿರುಗಾಳಿ.
Monday, 12 October 2009
ಎಲ್ಲೋ ಮಳೆಯಾಗಿದೆಯೆ೦ದು...
ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯೆ೦ದು ಕನಸೊ೦ದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ || ಎಲ್ಲೋ ||
ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕ೦ಡರೆ ದೇವರಿಗೂ ಕೋಪವು ಬರಬಹುದೇ || ಎಲ್ಲೋ ||
ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ || ಎಲ್ಲೋ ||
ಚಿತ್ರ: ಮನಸಾರೆ
Tuesday, 6 October 2009
ನಡೆದಾಡುವ ಕಾಮನಬಿಲ್ಲು...
ನಡೆದಾಡುವ ಕಾಮನಬಿಲ್ಲು
ಉಸಿರಾಡುವ ಗೊಂಬೆಯು ಇವಳು
ಸಿಗಲಾರಳು ಹೋಲಿಕೆಗೆ ಇವಳು
ಏನೆಂದರೂ ಸುಂದರ ಸುಳ್ಳು |||ನಡೆದಾಡುವ|||
ನಡೆದಾಡುವ ಕಾಮನಬಿಲ್ಲು
ನಕ್ಕರೆ ಸೇರಿದ ಹಾಗೆ ಸಾವಿರ ಶುಭ ಶಕುನ
ಮಾತಿನ ಲಹರಿಯೆ ಒಂದು ಸುಂದರ ಸವಿಗಾನ ||ನಕ್ಕರೆ||
ಬೆಳ್ಳಿಮೋಡ ಇವಳ ಮನಸು ಮನಸು
ಮಿಂಚು ಬಳ್ಳಿ ಅಂದದ ಮುನಿಸು
ಸ್ವರ್ಗದಲ್ಲೂ ಇರದ ಸೊಗಸು ಸೊಗಸು
ಮಾರುತ್ತಾಳೆ ಮಾಯದ ಕನಸು
ಪದೆ ಪದೆ ಪದೆ ಪದೆ ಆರೆರೆ
ಮರುಳಾದೆ ನೋಡಿ ಇವಳೆಂಥ ಮೋಡಿ ||ನಡೆದಾಡುವ||
ದೀಪದ ಕಣ್ಣುಗಳಲ್ಲಿ ಹುಣ್ಣಿಮೆ ಪ್ರತಿಕ್ಷಣವು
ಕೆನ್ನೆಯ ದಿಣ್ಣೆಗಳಲ್ಲಿ ಮುಗಿಯದ ಮುಂಜಾವು ||ದೀಪದ||
ಹೆಜ್ಜೆ ಹಾಕೊ ಇವಳ ನಯಕೆ ನಯಕೆ
ಭೂಮಿಗೂನು ಪುಳಕದ ಜಳಕ
ಬಾನಿನಿಂದ ಕೆಳಗೆ ಇಣುಕಿ ಇಣುಕಿ
ದೇವರಿಗೂ ನೋಡುವ ತವಕ
ಸವಿ ಸವಿ ಸವಿ ಸವಿ ಅಹ್ಹಹಾ
ಈ ಹುಡುಗಿ ಇದೇನೊ ಶರಣಾದೆ ನಾನು |||ನಡೆದಾಡುವ|||
ಚಿತ್ರ: ಪರಿಚಯ
Subscribe to:
Posts (Atom)