ಯಾರೂ ಹಾಡದ ಎಲ್ಲೂ ಕೇಳದ |೨|
ಮನದಾಳದ ಆಲಾಪವೇ ಎದೆಯಾಳದ ಆತಂಕವೇ
ಮಿಡುಕಾಡಿದೆ ಹುಡುಕಾಡಿದೆ ಹಾಡಾಗಿದೆ ಈಗ |೨|
ಯಾರೂ ಹಾಡದ ಎಲ್ಲೂ ಕೇಳದ |೨|
ನಿನ್ನ ಕಣ್ಣ ದೋಣಿಯಲ್ಲೆ ನನ್ನ ಕನಸುಳಿದಿದೆ
ನಿನ್ನ ಮಿಡಿವ ಹೃದಯದಲ್ಲೆ ನೂರು ಮಾತುಳಿದಿದೆ
ಕಾಣದಂತಹ ತಾಣವನ್ನ ಸೇರುವಂತಹ ಆಸೆಗೆ
ಕಾದಿದೆ ಕಂಬನಿ ಒರೆಸುವ ಕೈಗೆ
ದೋಣಿಯೆ ಆಸರೆ ದೂರದ ಯಾನಕೆ
ಹರಿಯುವ ಮೊರೆಯುವ ತೊರೆಯೊಳಗೆ
ಯಾರೂ ಹಾಡದ ಎಲ್ಲೂ ಕೇಳದ |೨|
ನಿಮ್ಮ ದಾರಿ ನೀವೆ ತುಳಿದು ಸೇರ ಬೇಕು ಗುರಿ
ಬೆಳಗು ಗರಿಯ ಬಣ್ಣವೆಲ್ಲ ಹಾಡಿ ನಾ ಹಾಜರಿ
ಬಾನಿನ ಬಯಲಿಗೆ ಸಾರಸ ಹಾರಿವೆ
ಊರನು ಸೇರಲು ದಾರಿಯೊ ನೂರಿವೆ
ಪ್ರೀತಿಯೇ ಆಸರೆ ಬಾಳಿನ ಪಯಣಕೆ
ಮರಗಳ ನೆರಳಿವೆ ಬಿಸಿಲೊಳಗೆ
ಯಾರೂ ಹಾಡದ ಎಲ್ಲೂ ಕೇಳದ |೨|
ಚಿತ್ರ: ಕಾರಂಜಿ
No comments:
Post a Comment