Monday, 22 June, 2009

ನೆನೆದು ನೆನೆದು ನೋಡು..

ನೆನೆದು ನೆನೆದು ನೋಡು ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ
ಕಣ್ಣ ತೆರೆದು ಓದೊ ಮುನ್ನ ಉರಿವ ಓಲೆ ಆಗಿ ಹೋದೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ

ನಾವು ಕುಳಿತ ಮರಗಳ ನೆರಳು ಹೇಳಿ ಕೊಳಲು ನಮ್ಮ ಕಥೆಯ
ಉದುರಿ ಹೋದ ಹೂವು ಘಮಿಸಿದೆ
ಸುದ್ದಿ ತಿಳಿಸೊ ಗೆಜ್ಜೆಯ ನಾದ ಕೇಳಿಸುತಿದೆ ದಾರಿಗೂ ಈಗ
ಒಡೆದ ಬಳೆಯ ಸದ್ದು ಘಲ್ಲಿದೆ
ಅಂಗೈಯ ಬೆಚ್ಚಗೆ ಇರಿಸೊ ನನ್ನ ಬೆರಳು ನಿನ್ನ ಕೈಲಿ
ಹೆಗಲಿಗೊರಗಿ ಹಗಲನು ಮರೆಸೊ ಕಥೆಗಳೆಲ್ಲ ಖಾಲಿ
ಮೊದ ಮೊದಲ ಕನಸನು ಹೇಳುವೆ ತೆರೆಯೋ ಕಂಗಳ

ಮಧುರವಾದ ಮಾತುಗಳೆಲ್ಲ ಬೆರೆತು ಹೋಯ್ತು ನಿನ್ನ ಮಾತಲ್ಲಿ
ಜಗವೆ ಮುಳುಗೆ ಮಾತು ಅಳಿಯದೆ
ಚದುರದಂತ ನೆನಪಿಗೆ ಈಗ ಉತ್ತರಿಸಲು ಬಂದಿಹೆ ನಲ್ಲ
ನನ್ನ ಜೀವ ನಿನ್ನ ಮರೆವುದೆ..
ನನ್ನ ಹೊಂದೆ ಬರುವ ನೆರಳ ಇಲ್ಲೇ ಅಗಲಿ ಹೋದೆ
ಕಣ್ಣ ಮುಂದೆ ಸಾಕ್ಷಿಯು ಇರಲು ಹೇಳಲೆಂದೆ ಬಂದೆ
ನಾ ಮತ್ತೆ ಸಿಗುವೆನು ಪ್ರಿಯತಮ ಹೃದಯ ಬಯಸಿದೆ
ನೆನೆದು ನೆನೆದು ನೋಡು ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ.


ಚಿತ್ರ: ಗಿಲ್ಲಿ

No comments: