Monday, 22 June 2009

ನೆನೆದು ನೆನೆದು ನೋಡು..

ನೆನೆದು ನೆನೆದು ನೋಡು ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ
ಕಣ್ಣ ತೆರೆದು ಓದೊ ಮುನ್ನ ಉರಿವ ಓಲೆ ಆಗಿ ಹೋದೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ

ನಾವು ಕುಳಿತ ಮರಗಳ ನೆರಳು ಹೇಳಿ ಕೊಳಲು ನಮ್ಮ ಕಥೆಯ
ಉದುರಿ ಹೋದ ಹೂವು ಘಮಿಸಿದೆ
ಸುದ್ದಿ ತಿಳಿಸೊ ಗೆಜ್ಜೆಯ ನಾದ ಕೇಳಿಸುತಿದೆ ದಾರಿಗೂ ಈಗ
ಒಡೆದ ಬಳೆಯ ಸದ್ದು ಘಲ್ಲಿದೆ
ಅಂಗೈಯ ಬೆಚ್ಚಗೆ ಇರಿಸೊ ನನ್ನ ಬೆರಳು ನಿನ್ನ ಕೈಲಿ
ಹೆಗಲಿಗೊರಗಿ ಹಗಲನು ಮರೆಸೊ ಕಥೆಗಳೆಲ್ಲ ಖಾಲಿ
ಮೊದ ಮೊದಲ ಕನಸನು ಹೇಳುವೆ ತೆರೆಯೋ ಕಂಗಳ

ಮಧುರವಾದ ಮಾತುಗಳೆಲ್ಲ ಬೆರೆತು ಹೋಯ್ತು ನಿನ್ನ ಮಾತಲ್ಲಿ
ಜಗವೆ ಮುಳುಗೆ ಮಾತು ಅಳಿಯದೆ
ಚದುರದಂತ ನೆನಪಿಗೆ ಈಗ ಉತ್ತರಿಸಲು ಬಂದಿಹೆ ನಲ್ಲ
ನನ್ನ ಜೀವ ನಿನ್ನ ಮರೆವುದೆ..
ನನ್ನ ಹೊಂದೆ ಬರುವ ನೆರಳ ಇಲ್ಲೇ ಅಗಲಿ ಹೋದೆ
ಕಣ್ಣ ಮುಂದೆ ಸಾಕ್ಷಿಯು ಇರಲು ಹೇಳಲೆಂದೆ ಬಂದೆ
ನಾ ಮತ್ತೆ ಸಿಗುವೆನು ಪ್ರಿಯತಮ ಹೃದಯ ಬಯಸಿದೆ
ನೆನೆದು ನೆನೆದು ನೋಡು ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ, ಓ.., ನಿನ್ನಲ್ಲೇನೆ ನನ್ನ ಕಂಡಿಹೆ.


ಚಿತ್ರ: ಗಿಲ್ಲಿ

Wednesday, 3 June 2009

ಮರಳಿ ಮರೆಯಾಗಿ...

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..
ಮರಳಿ ಮರೆಯಾಗಿ ತರಲಿ ತಂಗಾಳಿ ಹೊಮ್ಮಿ ಹೊಸತಾದ ಹರುಷ.. ಹರವು
ಹಸಿ ಖುಶಿ ಕವನ ಕನಸನಿ ನೀ ನನಸಾಗಿಸಿ..
ಕಲರವ ನೀ ಪಸರಿಸಿ.. ನೀ ಇನಿಯನೆ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..

ರಿಂಗಣ ಹೊಸತನ.. ತನುವ ಈ ನರ್ತನ
ತಿಂಗಳ ಬೆಳಕನ ಕಂಡೆ ಈ ಸಂಜೆ ನಾ..
ಧರೆಗಿಳಿದ ಕಿನ್ನರ ನೀ.. ವಿಸ್ಮಯದ ಕಿರಣವೆ ನೀ..
ನನ್ನ ಕನಸುಗಳ ತೇಲಾಡಿ ಕುಣಿಯುತಿದೆ..
ನೀ ಇನಿಯನೇ.. ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..

ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೇ..
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ.. ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೀಳಿ ಮುಡಿಗಿರಿಸು
ನೀ ಇನಿಯನೇ.. ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವು.. ಸಿಹಿಸವಿ ಕವನ..


ಚಿತ್ರ: ಸವಾರಿ.