Wednesday, 29 October 2008

ಮೋಡದ ಒಳಗೆ...


ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಕಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ

ನಿಂತಲಿ ನಾ ನಿಲಲಾರೆ ಎಲ್ಲರೂ ಹೀಗಂತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೂ ನಾನೆ ಪ್ರೀತಿ ಬಲೆಯೊಳಗೂ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜ್ನೂ ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ |ಮೋಡದ ಒಳಗೆ|

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ ||ಮೋಡದ ಒಳಗೆ||


ಚಿತ್ರ: ಪಯಣ

No comments: