Wednesday, 29 October 2008

ಮೋಡದ ಒಳಗೆ...


ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಕಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ

ನಿಂತಲಿ ನಾ ನಿಲಲಾರೆ ಎಲ್ಲರೂ ಹೀಗಂತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೂ ನಾನೆ ಪ್ರೀತಿ ಬಲೆಯೊಳಗೂ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜ್ನೂ ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ |ಮೋಡದ ಒಳಗೆ|

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ ||ಮೋಡದ ಒಳಗೆ||


ಚಿತ್ರ: ಪಯಣ

Friday, 24 October 2008

ಮಾನಸ ಗಂಗೆ...


ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ

ಚಂದಮಾಮ ಕೈ ಚಾಚಿದ ಬಾರೆ ಎಂದು ಗೋಳಾಡಿದ
ಇವಳ ಬಿಟ್ಟು ಹೋಗಲಾರೆ ಊಹುಂ ಎಂದನು
ಅಂತರಂಗ ಹಾಲಾಯಿತು ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕೂ ಇವಳೇ ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ ಅನುಬಂಧಕೂ ಇವಳೇ
ಅನುರಾಗವು ಇವಳೇ ಅನುಗಾಲವು ಇವಳೇನೆ
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ

ಕಪ್ಪು ಕಣ್ಣು ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆ ಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಕಣ್ಣುಗಳಿಗೆ ಬಲು ರೂಪಸಿ
ನನ್ನ ಪಾಡು ಇವಳೇ ನನ್ನ ಹಾಡು ಇವಳೇ
ನನ್ನ ಜಾಡು ಇವಳೇ ಸಂದೇಶವು ಇವಳೇನೆ
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ


ಚಿತ್ರ: ಪಯಣ

Tuesday, 21 October 2008

ಜೊತೆ ಜೊತೆಯಲಿ...


ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ

ದಿನ ದಿನ ದಿನ ಏನಾದರೂ ಚಿನ್ನ
ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ
ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೇ ಬಾರೇ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳಿಗಾದ ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ

ಕಣ ಕಣ ಕಣ ಹೊಸ ಹುರುಪಿನ
ಚಿಲುಮೆಯು ಈ ಪ್ರೇಮ
ಮಿನ ಮಿನ ಮಿನ ಹೊಸ ಬೆಳಕಿನ
ಹೊಳಪಿದು ಈ ಪ್ರೇಮ
ಏಳೇಳು ಜನುಮದ ಜೋಡಿಯಾಗಿ
ಹೀಗೆನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೆ ಹಾಡಿದೆ ಹಾಡು ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸಸ ರಿರಿ ಗಗ ಮಮ


ಚಿತ್ರ: ವಂಶಿ

Monday, 20 October 2008

ಭುವನಂ ಗಗನಂ...


ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು ಹಸಿರನು ನೀಡಿದ
ಇರುಳನು ನೀಗಲು ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದಿರು ನಿಲಲು ಇವನು ಮುನಿದೇ ಬಿಡುವ |ಭುವನಂ ಗಗನಂ|

ತಾಯಿಗೆ ಮಗನೇ ಜೀವ
ಆ ಮಗನಿಗೆ ತಾಯಿ ದೈವ
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡ
ಜಗದ ಬಾರಿ ಸಾಗರವ ಜಿಗಿದು
ಈಜಿ ಮೀರಿಸುವ ಪ್ರಬಲ ಧೈರ್ಯ ನೀಡಿರುವ ಶಿವನೇ |ಭುವನಂ ಗಗನಂ|

ಕಾಲ ಓಡುತಿದೆ ಬೇಗ ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ ಜನರು ಮಾಡೊ ಕಾಯಕವ
ನಿಜದ ಅಂಕೆ ನೀಡಿರುವ ತಿಳಿಯೋ ||ಭುವನಂ ಗಗನಂ||


ಚಿತ್ರ: ವಂಶಿ

Wednesday, 15 October 2008

Tongue Twister

One of the favourite tongue twister taught to me by my uncle in my childhood days,

ಕುಂಟರಣೆ ಕುರುಡರಣೆ
ಕೊಡದೊಳಗೆ ಎರಡರಣೆ.

:-)

Monday, 6 October 2008

ತಂದೆ ತಾಯಿಗಳೆಷ್ಟೋ...

ತಂದೆ ತಾಯಿಗಳೆಷ್ಟೋ ತಾನಿದ್ದ ಊರೆಷ್ಟೋ
ಬಂಧು ಬಳಗಗಳೆಷ್ಟೋ ತನಗೆ ಸತಿ ಸುತರೆಷ್ಟೋ
ಬಂದ ಜನುಮಗಳೆಷ್ಟೋ ಹೊಂದಿದ ಮರಣವೆಷ್ಟೋ
ಒಂದೊಂದು ಎಣಿಕೆಗಾಣೆ ಒಂದೊಂದು ಎಣಿಕೆಗಾಣೆ
ಹಿಂದೆ ಕೊಂದವರ್ಯಾರು ಇಂದು ಸಲಹುವರ್ಯಾರು
ಹಿಂದೆ ಕೊಂದವರ್ಯಾರು ಇಂದು ಸಲಹುವರ್ಯಾರು
ಮುಂದೆ ಬಾರೆಂದೆನ್ನ ಕರೆಯುವರ ನಾ ಕಾಣೆ
ಮುಂದೆ ಬಾರೆಂದೆನ್ನ ಕರೆಯುವರ, ಎನ್ನ ಕರೆಯುವರ ನಾ ಕಾಣೆ
ತಂದೆ ವರಕಾಗಿನೆಲೆಯಾದಿ ಕೇಶವ, ಕಾಗಿನೆಲೆಯಾದಿ ಕೇಶವ
ನಿನ್ನ ದ್ವಂದ್ವ ಪದ ಬಿಡೆನೆ ಕಂಡ್ಯಾ
ನಿನ್ನ ದ್ವಂದ್ವ ಪದ ಬಿಡೆನೆ ಕಂಡ್ಯಾ.


--: ದಾಸರ ಪದಗಳು