ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾನರೆಘಳಿಗೆ
ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ
ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಘಳಿ ಘಳಿ ಘಳಿಗೆ..
ಘಳಿ ಘಳಿ ಘಳಿಗೆ..
ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ
ದುಂಬಿಗಿನ್ನು ಸಿಹಿಯೂಟ ಮೆಲ್ಲ ಮೊಗ್ಗಿನ ಮೊಗದೊಳಗೆ
ನಿದಿರೆಗಿನ್ನು ಜೂಟಾಟ ಹಗಲು ಕಾಣೊ ಕನಸೊಳಗೆ
ಆ ಊಟ..
ಈ ಆಟ..
ಬೇಕಾಯ್ತು ಮನಗಳಿಗೆ || ಘಳಿ ಘಳಿ ಘಳಿಗೆ ||
ನರಗೊಂಬೆ ನಡು ಒಳಗೆ ಬಳುಕಾಯ್ತು ಈ ನಡಿಗೆ
ಪ್ರಿಯವಾದ ತೋಳೊಳಗೆ ಬಿಗಿಯಾಯ್ತು ಮೈಯುಡುಗೆ
ಅರ್ಧನಾರಿ ಪರಮೇಶ ಆಗೋವಾಸೆ ಒಳಗೊಳಗೆ
ಮನ್ಮಥಯ್ಯನ ಉಪದೇಶ ಕೇಳುವಾಸೆ ಕಿವಿಗಳಿಗೆ
ಆ ಆಸೆ..
ಈ ಆಸೆ..
ಬೇಕಾಯ್ತು ಎದೆಯೊಳಗೆ || ಘಳಿ ಘಳಿ ಘಳಿಗೆ ||
ಚಿತ್ರ: ತವರಿಗೆ ಬಾ ತಂಗಿ
No comments:
Post a Comment