Thursday, 25 September 2008

ಕಣ್ಣಿನಲ್ಲಿ ಕಣ್ಣನಿಟ್ಟು...

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಮನಸು ಕೇಳುವ ನೂರು ಆಸೆಗೆ ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ ಯಾವ ಬೇಲಿ ಇರದು
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

ಹೊಸದಾಗಿ ಶುರುವಾಯಿತ ನಮ್ಮೊಳಗೆ ಈ ಗೆಳೆತನ
ನಿನ್ನೆಗಳ ನೆರಳಿಲ್ಲದೆ ಹಾಡುವುದೆ ನೆನಪು ದಿನ
ಮರೆವೆನೆಂದರು ನೀನೀಗ ಮರೆಯಲಾಗದು ಆ ನೋವ
ನೋವ ಎದೆಯೊಳಗೆ ಬಚ್ಚಿಟ್ಟು ಲಾಭವೇನಿದೆ ಓ ಜೀವ
ಹೃದಯದ ಮಾತನು ಒಮ್ಮೆ ಕೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

ಬಾನೇರೊ ಆ ಮೋಡವು ಹನಿಯಾಗಿ ಧರೆಗಿಳಿಯದೆ
ಈ ಹೃದರು ನಿನ್ನ ಹೆಸರ ಅದು ಮರೆವುದೆ
ಇಂಥ ದಾರೀಲಿ ರೆಕ್ಕೇ ಇಲ್ಲದ ಈ ಪಯಣ
ನಾನಾರೂಪದ ತಿರುವಲ್ಲಿ ಎಲ್ಲೂ ಕಾಣದು ನಿಲ್ದಾಣ
ಮರಳಗೂಡ ಕದಡುವಾಸೆ ಇನ್ನೂ ತೀರಲಿಲ್ಲವೇ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಎರಡು ಮನಸಲು ಒಂದೆ ಮಾತಿದು ಯಾಕೆ ಮಗುವ ಮುನಿಸು
ನಾನು ನೀನು ಇಬ್ಬರು ಎಂದರೆ ನಂಬುವುದೆ ಈ ಮನಸು


ಚಿತ್ರ: ನಿನಗಾಗಿ

Tuesday, 16 September 2008

ಘಳಿ ಘಳಿ ಘಳಿಗೆ...

ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾನರೆಘಳಿಗೆ
ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ

ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ

ಘಳಿ ಘಳಿ ಘಳಿಗೆ..
ಘಳಿ ಘಳಿ ಘಳಿಗೆ..

ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ

ದುಂಬಿಗಿನ್ನು ಸಿಹಿಯೂಟ ಮೆಲ್ಲ ಮೊಗ್ಗಿನ ಮೊಗದೊಳಗೆ
ನಿದಿರೆಗಿನ್ನು ಜೂಟಾಟ ಹಗಲು ಕಾಣೊ ಕನಸೊಳಗೆ

ಆ ಊಟ..
ಈ ಆಟ..
ಬೇಕಾಯ್ತು ಮನಗಳಿಗೆ || ಘಳಿ ಘಳಿ ಘಳಿಗೆ ||

ನರಗೊಂಬೆ ನಡು ಒಳಗೆ ಬಳುಕಾಯ್ತು ಈ ನಡಿಗೆ
ಪ್ರಿಯವಾದ ತೋಳೊಳಗೆ ಬಿಗಿಯಾಯ್ತು ಮೈಯುಡುಗೆ

ಅರ್ಧನಾರಿ ಪರಮೇಶ ಆಗೋವಾಸೆ ಒಳಗೊಳಗೆ
ಮನ್ಮಥಯ್ಯನ ಉಪದೇಶ ಕೇಳುವಾಸೆ ಕಿವಿಗಳಿಗೆ

ಆ ಆಸೆ..
ಈ ಆಸೆ..
ಬೇಕಾಯ್ತು ಎದೆಯೊಳಗೆ || ಘಳಿ ಘಳಿ ಘಳಿಗೆ ||

ಚಿತ್ರ: ತವರಿಗೆ ಬಾ ತಂಗಿ