Wednesday, 7 May 2008

ಒಮ್ಮೆ ನಿನ್ನನ್ನು ಕಣ್ತುಂಬ...

ನನ್ನ ಹಳೆಯ ನೆನಪುಗಳ ಕೆದಕುತ ಬರೆಯುತ್ತಿದ್ದೇನೆ ಈ ಕೆಳಗಿನ ಸಿನಿಮಾ ಹಾಡಿನ ಸಾಲುಗಳನ್ನ...


ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೊ ಬಾನಲ್ಲೊ ಇನ್ನೆಲ್ಲೋ ನಾ ಕಾಣೆ

ಅರಳಿರುವ ಹೂವಿನಲ್ಲಿ ನಿನ್ನ ನೋಟವ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ
ಇಂಪಾದ ಗಾನದಲ್ಲಿ ನಿನ್ನ ಮನದ ಭಾವವ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವ
ನವಿಲಾಡೋ ನಾಟ್ಯದಲ್ಲಿ ನಿನ್ನ ಚೆಂದವ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರಗಾದೆ

ಮಿನುಗುತಿಹ ತಾರೆಯೆಲ್ಲ ನಿನ್ನ ಕಣ್ಗಳೋ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ


ಚಿತ್ರ: ಗಾಳಿ ಮಾತು
ಬರೆದವರು: ಚಿ ಉದಯಶಂಕರ್

No comments: