Wednesday, 4 February 2009

ಅಂದು ಒಮ್ಮೆ...

ಅಂದು ಒಮ್ಮೆ ಸುಮ್ಮನೆ
ಕದ್ದು ನೋಡಿ ನಿನ್ನನೆ
ಕಳೆದುಕೊಂಡೆ ನನ್ನೇ ನಾನು
ಮೆಲ್ಲ ಮೆಲ್ಲನೆ |ಅಂದು|

ಯಾರು ಯಾರು ಯಾರು ನೀನು ಹೇಳಬಾರದೆ
ನಾನೇ ನೀನು ನೀನೇ ನಾನು ಯಾಕೆ ಕೇಳಿದೆ |೨|
ನನ್ನೇ ಮರೆತು ಯಾಕೋ ನಿನ್ನ ಹಾಗೆ ಕೇಳಿದೆ |ಅಂದು|

ಯಾಕೋ ಏನೋ ಈಗ ನಂಗೆ ಏನೋ ಆಗಿದೆ
ಈಗ ಈಗ ನಂಗೂ ಕೂಡ ಹಾಗೇ ಆಗಿದೆ |೨|
ಹೇಳಲಾಗದಂತದೇನೋ ಆಗಿ ಹೋಗಿದೆ |ಅಂದು|


ಚಿತ್ರ: ಕೆಂಪ

Tuesday, 3 February 2009

ಗೊಲ್ಲಯ್ಯ ಗೊಲ್ಲಯ್ಯ...

ಗೊಲ್ಲಯ್ಯ ಗೊಲ್ಲಯ್ಯ ಗೋವೆಲ್ಲ ಎಲ್ಲಯ್ಯ
ಊದಯ್ಯ ಊದಯ್ಯ ಕೊಳಲನ್ನ ಊದಯ್ಯ
ಗೋವೆಲ್ಲ ಓಡೋಡಿ ಓಡೋಡಿ ಬರುತಾವೊ
ಕುಣಿಬಾರೊ ತಾನಿ ತಂದಾನೋ
ಕುಣಿಬಾರೊ ತಾನಿ ತಂದಾನೋ |ಗೊಲ್ಲಯ್ಯ|

ಕುಂಬಾರ ಹೇಳು ನಂಗೆ
ತಿರುಗಾಣಿ ತಿರುಗೋದು ಹೆಂಗೆ |೨|
ತುಂಡಾದ ಚಂದ್ರನ ಹಂಗೆ
ಮಡಿಕೇನ ಮಾಡೋದು ಹೆಂಗೆ
ಆ ಬಾನಲ್ಲಲ್ಲಲ್ಲಲ್ಲಿ ಹಲವು ಸಣ್ಣ
ಚಂದಿರನ ನಾವಿಡೋಣ ಬಾ
ಕುಣಿಯೋಣ ತಾನಿ ತಂದಾನೋ
ಕುಣಿಯೋಣ ತಾನಿ ತಂದಾನೋ |ಗೊಲ್ಲಯ್ಯ|

ಬಾರಯ್ಯ ಬಳೆಗಾರಣ್ಣ
ತೋರಯ್ಯ ಮಲಹಾರನ |೨|
ಬಳೆಗಿಂತ ಬಣ್ಣ ಬಣ್ಣ
ನೀ ಆಡೋ ಮಾತು ಚೆನ್ನ
ಆ ಮಳೆ ಬಿಲ್ಲ ಬಳೆ ತರುತೀಯೇನೋ
ತೊಡುವೆನೇನೋ ಈ ಚಕೋರಿಗೆ
ಕುಣಿಯೋಣ ತಾನಿ ತಂದಾನೋ
ಕುಣಿಯೋಣ ತಾನಿ ತಂದಾನೋ |ಗೊಲ್ಲಯ್ಯ|


ಚಿತ್ರ: ಕೆಂಪ

Monday, 2 February 2009

ಖುಷಿಯಾಗಿದೆ ಏಕೋ...


ಅವಳಂದ್ರೆ ನಂಗೆ ತುಂಬಾ ಇಷ್ಟ
ಅವಳಿಗೂ ನಾನಂದ್ರೆ ಇಷ್ಟ... ಅನ್ಸುತ್ತೆ

ಖುಷಿಯಾಗಿದೆ ಏಕೋ ನಿನ್ನಿಂದಲೇ
ನಾ ನೋಡದೆ ನಿನ್ನನು ಇರಲಾರೆನೇ
ಒಮ್ಮೆ ನೀ ನಕ್ಕರೇ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೇ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ
ಆದರೂ ಮರೆತೇ ಇಲ್ಲ ನಾ ನಿನ್ನ
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೆ ನಿನ್ನನೇ ನೋಡುವೆ

ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ನ ಹೆಸರ ನಾ ಬರೆವೆ
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ
ನಿನ್ನ ಸ್ಪರ್ಶವ ಸವಿದೆ
ನಿನ್ನಲ್ಲೆ ನಾ ಬೆರೆತೆ
ಆ ಮಂಜಿನ ಹನಿಗಳು ನೀನಲ್ಲವೆ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೆ ನಿನ್ನನೇ ನೋಡುವೆ

ಅವನಂದ್ರೆ ನಂಗೆ ತುಂಬಾ ಇಷ್ಟ
ಅವನಿಗೂ ನಾನಂದ್ರೆ ಇಷ್ಟ... ಅನ್ಸುತ್ತೆ


ಚಿತ್ರ: ತಾಜ್ ಮಹಲ್