Friday, 18 July 2008

ನನ್ನ ಎದೆಯಲಿ...

ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
ಕೈ ಮುಗಿವೆ ನನ್ನ ಮರೆತು ಬಿಡು, ಮರೆತು ಬಿಡು, ಮರೆತು ಬಿಡು. |ನನ್ನ|

ಎಂದೋ ಕರಗಿರುವ ಪ್ರೇಮ ಚಂದಮಾಮ
ಹೊರಟು ಹೋದ ಕಾರ್ಮುಗಿಲ ಚಿತೆಗೆ
ಎಂದೂ ಜೊತೆಗೇನೆ ಸಾಗೋ ನನ್ನ ನೆರೆಳು
ಬೇಸರದಿ ಬರುತಲಿದೆ ಜೊತೆಗೆ
ಕತ್ತಲೆಯ ಹೊತ್ತ ಈ ಮುಖವ
ಮರೆತು ಬಿಡು ಬೆಳಕಿನಲೇ. |ನನ್ನ|

ಹಗಲು ಕನಸಿನಲಿ ಗಾಳಿ ಗೋಪುರದಲಿ
ಕುಳಿತೆ ನಾ ಬಳಿದೆ ನಾ ಹೊಳಪು
ನಾಳೆ ಎಂಬುದಕೆ ಹಿಂದು ಮುಂದು ಇಲ್ಲ
ಜೊತೆಗೇಕೆ ಬೆಂಬಿಡದ ನೆನಪು
ಮುಳ್ಳಿರದ ನಿನ್ನ ದಾರಿಯಲಿ ತಿರುಗದಲೇ ನಡೆದು ಬಿಡು
ಅಂತಃಪುರದ ಬಾಗಿಲು ಬಡಿದ ಕೈಗಳ ತಪ್ಪನು ಕ್ಷಮಿಸಿ ಬಿಡು, ಕ್ಷಮಿಸಿ ಬಿಡು
ಅಂಗಳದ ನನ್ನ ಕಾಲ್ಗುರುತು ನಗು ನಗುತ ಅಳಿಸಿಬಿಡು.

ಚಿತ್ರ: ಅರಮನೆ

Wednesday, 2 July 2008

ನೆನಪಾಗದೇ...

ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ
ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ
ನೀನೇ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೇ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ

ಸ್ವಾತಿ ಹನಿ ಮುತ್ತಾಯಿತು ಈ ನನ್ನೆದೆಯ ಚಿಪ್ಪಿನಲಿ
ಇನ್ಯಾರದೋ ಕೈ ಸೇರಿತು ಬರಿ ನೋವೊಂದೆ ಉಳಿದಿತ್ತು ಇಲ್ಲಿ
ಸರಿಯೇ ಈ ರೀತಿಯು ಭ್ರಮೆಯೇ ಆ ಪ್ರೀತಿಯು ಅರಿಯೆ ನಾನೇನನೂ
ನೀನೇ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೇ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ

ನಾನಂಬಿದೆ ನಿನ್ನೊಲವನು ನನ್ನ ನಂಬಿಕೆಯೇ ಉರುಳಾಯಿತೇ
ಈ ಪ್ರೀತಿಯು ತನನಂ ಊರಲು ಅದು ಎಂದೆಂದು ಕಾಯುವುದಂತೆ
ಬದುಕೇ ಅಯೋಮಯ ಬಿಡು ನೀ ಹತಾಶೆಯ ಇರಲಿ ಸದಾಶಯ
ನೀನೇ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೇ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ

ನೆನಪಾಗಿದೇ ನೆನಪಾಗಿದೇ ಆ ಕ್ಷಣಗಳು ಆ ದಿನಗಳು ನನಗೀಗ ನೆನಪಾಗಿದೇ.



ಚಿತ್ರ: ಹುಡುಗಾಟ