Wednesday, 30 April 2008

ಮಿಂಚಾಗಿ ನೀನು ಬರಲು...


ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ.

ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು.

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು.

ಚಿತ್ರ: ಗಾಳಿ ಪಟ
ಬರೆದವರು: ಜಯಂತ ಕಾಯ್ಕಿಣಿ

Friday, 25 April 2008

ಪದೇ ಪದೇ...


ಪದೇ ಪದೇ ನೆನಪಾದೇ ಪದೇ ಪದೇ ನೆನೆದೇ
ಪದೇ ಪದೇ ಮರೆಯಾದೇ ಪದೇ ಪದೇ ಕರೆದೇ
ಯಾವ ಜನ್ಮದಲಿ ನನ್ನ ನಿನ್ನ ನಡುವೆ ಪ್ರೀತಿ ಮೂಡಿತೇನೋ.

ಮೆಲ್ಲ ಮೆಲ್ಲ ನನ್ನಲ್ಲೆಲ್ಲ ನೀ ತುಂಬಿಕೊಂಡೆ ಒಲವೇ
ಕಳ್ಳ ಕಳ್ಳ ನನ್ನ ನಲ್ಲ ಕಣ್ಣಲ್ಲಿ ದೋಚಿ ಬಿಡುವೆ
ಹಗಲಲು ಕನಸು ಕನಸಲಿ ನೀ ಉಸಿರಿನ ಉಸಿರು ನೀ.

ಎಲ್ಲೋ ಎಲ್ಲೋ ಮುತ್ತು ಚೆಲ್ಲೋ ಪ್ರೀತಿನೇ ಸ್ವಾತಿ ಮಳೆಯೋ
ಅಲ್ಲೋ ಇಲ್ಲೋ ಎಲ್ಲ ಮೆಲ್ಲೋ ಪ್ರೀತಿನೇ ಜೇನ ಹೊಳೆಯೋ
ಪದಗಳೇ ಇರದ ಕವಿತೆ ಇದೂ ಸವಿ ಸವಿ ಸುಧೆಯಿದೂ.

ಚಿತ್ರ: ರಾಮ ಶಾಮ ಭಾಮ
ಬರೆದವರು: ಕವಿರಾಜ್

Thursday, 24 April 2008

ಕವಿತೆ ಕವಿತೆ...


ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೇ ನೀ ತಂದ ಹಾಡಿಗೆ ನಾ ಸೋತೆ.

ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲ ದಡದಾಟೋ ಅಲೆಗಳಲೂ ನಲುಮೆ
ಹೊಮ್ಮುತಿದೆ ರಾಗದಲಿ ಸ್ವರ ಮೀರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು.

ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಾದೋ ಸಮಯ
ಏಕಾಂತ ಕಲ್ಲನ್ನು ಮಾಡುವುದೋ ಕವಿಯ.


ಚಿತ್ರ: ಗಾಳಿಪಟ
ಬರೆದವರು: ಹೃದಯಶಿವ

Wednesday, 23 April 2008

ಹೂ ಕನಸ ಜೋಕಾಲಿ...


ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲಿ ಜೊತೆಗಿರುವೆ ಚಿತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ನಾ ನಿಂತ ನೆಲವನು ಕಾಲ ಬೆರಳು ತಬ್ಬಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕನಲುತಿದೆ ನಸು ನಾಚಿಕೆಯೋ
ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ, ಜೋಕಾಲಿ.

ಬಿಡದ ಕನಸು ಬಿಡದ ನೋವು ಬಿಡದ ಮಿಡಿತ ಕೊನೆಯವರೆಗೆ
ಜೀವದ ಜೊತೆಗೆ ಎದೆಯ ಸುಡುವ ತಂಪು ನೆನಪುಗಳು
ಪ್ರತಿಯೊಬ್ಬರಲೂ ಕಾಡುವ ಅವಳು ಬೆಂಬಿಡದಂತಹ ಆ ನಗುವಿನ ನೆರಳು
ನಗುತ ಕೊಲುವ ಒಲವೋ.
ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ, ಹೂ ಕನಸ ಜೋಕಾಲಿ.

ಮೊದಲ ನೋಟ ಮೊದಲ ಮಾತು ಮೊದಲ ಸ್ಪರ್ಷ ಮೊದಲ ಆಹಾ
ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪೋ
ಈ ಮೊಗ್ಗನ್ನ ಹೂವಾಗಿಸು ಬಾರೋ ನಾನಾಗುವೆನು ನಿನ್ನ ಹೂವಿನ ತೇರು
ಹೆಣ್ಣ ಮನವ ತಿಳಿಯೋ.
ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ
ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ
ಬಿಡದ ನಿನ್ನ ನಗೆಯ ಜೊತೆಗೆ ಮುಗಿದ ದಾರಿಯೋ
ಮಡಿದ ಕನಸಿನ ಮುಗಿಲಿಗೆ ಮೌನ ದೇಣಿಯೋ
ಈ ನಗುವ ಮುಖದಲ್ಲಿ ಬರಿ ನೋವಿದೆಯೋ
ಉಸಿರಾಡೋ ಶವಕಿಲ್ಲಿ ಸಾವಿದೆಯೋ
ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ, ಅಲೆಮಾರಿ.


ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್

Wednesday, 16 April 2008

Forge Your Destiny in Fable: The Lost Chapters

The best ever game I enjoyed playing in Mac, Fable: The Lost Chapters. I am happy to say that I was part of the development team at Robosoft Technologies when we ported this game to Macintosh platform.

Apple iPhone India launch likely in Sept

Indians will no longer need to illegally buy, unlock and then use the most-desired item on gadget lovers' lists -- the Apple iPhone. Its much-awaited and delayed India launch is expected with telecom operator Vodafone in the first week of September.

For more info plz visit here.