Sunday 7 March, 2010

ಮೌನಿ ನಾನು..


ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸೊಂಥರಾ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನೊ ಅರಿಯೆನು |

ತೇಲಿ ಬಂದ ಸವಿ ಸೋನೆ ನೀನು
ಕಲ್ಲಿನಂಥ ಹೃದಯದಲ್ಲಿ ಹೂವ ಬೆಳೆಸಿದೆ
ಮೋಡವಿರದ ಸುಡುವಾನುದಾರಿ
ಮಳೆಯ ಬಿಲ್ಲಿನಂತೆ ನೀನು ಬಣ್ಣ ಚೆಲ್ಲಿದೆ
ಸೆಳೆದೆ ನೀ ಈ ನನ್ನ ಒಲವಿನೂರಿಗೆ
ಇಳಿದೆ ನೀ ಈ ನನ್ನ ಎದೆಯ ಗೂಡಿಗೆ
ನಂಗು ಒಂದು ಮನಸುಂಟು ಎಂದು
ಅರಿವಾಗಿ ಹೋದ್ದು ಇಂದು ನನಗೆ ನಿನ್ನಿಂದಾನೆ |

ನೂರು ಸಾರಿ ನಿನ್ನ ನೋಡಿ ನೋಡಿ
ತಿರುಗಿ ತಿರುಗಿ ನೋಡುವಾಸೆ ನನ್ನ ಕಾಡಿದೆ
ನಾವು ಸೇರಿ ನಡೆವಾಗ ದಾರಿ
ಎಂದು ಎಲ್ಲು ಮುಗಿಯಬಾರದೆಂದು ಅನಿಸಿದೆ
ಕನಸೆ ನೀ ಬಾ ನನ್ನ ಹೃದಯ ತುಂಬಿಕೋ
ಸೊಗಸೇ ನೀ ಬಾ ನನ್ನ ಬದುಕ ಸೇರಿಕೋ
ನನ್ನ ನಾನೆ ಮರೆವಂತೆ ಮಾಡೋ
ನಿನದೆಂಥ ಮೋಡಿ ನನ್ನ ತುಂಬ ನೀನೆ |


ಚಿತ್ರ: ಸೂರ್ಯಕಾಂತಿ